







ಕಾವು :ಬುಶ್ರಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪುತ್ತೂರು ಗ್ರಾಮಾಂತರ ವಲಯ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯೊಂದಿಗೆ ಐದು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 10ನೇ ತರಗತಿ ಮಿತೇಶ್ ನಾಯ್ಕ್, ಎಂಟನೇ ತರಗತಿ ಸಾನ್ವಿ ಹೆಚ್ ಪೂಜಾರಿ, ಎಂಟನೇ ತರಗತಿ ಶಜ್ನ, ಎಂಟನೇ ತರಗತಿ ಹುದಾ ಮತ್ತು ಝೆಹನ 7ನೇ ತರಗತಿ ಈ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ತ್ರಿವೇಣಿ ಕುಲಾಲ್ ಇವರು ತರಬೇತಿಯನ್ನು ನೀಡಿರುತ್ತಾರೆ. ತಂಡದ ವ್ಯವಸ್ಥಾಪಕರಾದ ಉಮೇಶ್ ನಾಯ್ಕ್ ಮತ್ತು ಹರ್ಷಿತ ಅಮೈ ಇವರು ಸಹಕಾರ ನೀಡಿರುತ್ತಾರೆ












