ಉಪ್ಪಿನಂಗಡಿಯಲ್ಲಿ ಕುರಲ್ ಪರ್ಬ – ತೆನೆ ಹಬ್ಬ ಆಚರಣೆ

0

ಉಪ್ಪಿನಂಗಡಿ : ನವರಾತ್ರಿ ಪ್ರಾರಂಭದ ದಿನವಾದ ಆದಿತ್ಯವಾರದಂದು ಪರಂಪರಾಗತವಾದ ಕುರಲ್ ಪರ್ಬ ಯಾ ತೆನೆ ಹಬ್ಬದ ನಿಮಿತ್ತ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಹಾಗೂ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿ ತೆನೆ ವಿತರಣೆ ನಡೆಯಿತು.

ತೆನೆ ಸ್ವೀಕರಿಸಿದ ಭಕ್ತಾದಿಗಳು ತೆನೆಯನ್ನು ಮನೆಯಲ್ಲಿ ಪೂಜೆ ಸಲ್ಲಿಸಿ ತಮ್ಮ ತಮ್ಮ ಪರೆಂಪರೆಗನುಗುಣವಾಗಿ ಹೊಸ ಅಕ್ಕಿ ಊಟದ ವಿಧಿ ವಿಧಾನಗಳನ್ನು ನಡೆಸಿದರು.ಈ ಸಂಧರ್ಭದಲ್ಲಿ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್, ಸದಸ್ಯರುಗಳಾದ ಜಿ. ಕೃಷ್ಣ ರಾವ್ ಅರ್ತಿಲ, ವೆಂಕಪ್ಪ ಪೂಜಾರಿ , ದೇವಿದಾಸ ರೈ, ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ,ಚಂದಪ್ಪ ಮೂಲ್ಯ, ಕೈಲಾರ್ ರಾಜಗೋಪಾಲ ಭಟ್, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಕೃಷ್ಣಪ್ರಸಾದ್ ಬಡಿಲ, ದಿವಾಕರ, ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಆಡಳಿತ ಮೊಕ್ತೇಸರರಾದ ಬಿ ಗಣೇಶ್ ಶೆಣೈ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಪ್ರಮುಖರಾದ ಏಕನಾಥ ಶೆಣೈ, ಹರೀಶ್ ಪೈ, ರಾಜೇಶ್ ಪೈ, ನೇಜಿಗಾರ್ ಸುರೇಶ್ ಪೈ, ಕರಾಯ ಗಣೇಶ್ ನಾಯಕ್, ದೇವಾನಂದ ಶೆಣೈ, ಜಯಂತ ನಾಯಕ್, ಕೆ ಕೃಷ್ಣ ಭಟ್ , ಹೆಚ್ ರಾಘವೇಂದ್ರ ಪ್ರಭು ಗಿರಿಧರ ನಾಯಕ್ , ವಿದ್ಯಾಧರ ಮಲ್ಯ, ಮಂಜುನಾಥ , ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here