







ಪುತ್ತೂರು: ಗ್ರಾಮದ ಶಂಭುಗ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನವರಾತ್ರಿ ನೇಮವು ಅ.18ರಂದು ರಾತ್ರಿ ಶಂಭುಗ ಬಾಲಮಂಟಮೆಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಗೊನೆಮುಹೂರ್ತವು ಗ್ರಾಮದ ತಂತ್ರಿಗಳಾದ ಪಳನೀರು ಅನಂತ ಭಟ್ಟರ ಪೌರೋಹಿತ್ಯದಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಮಾಣಿಗುತ್ತು ಸಚಿನ್ ರೈ, ಅರೆಬೆಟ್ಟುಗುತ್ತು ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ಮಜಿ ತಿರುಮಲಕುಮಾರ್, ಸದಾಶಿವ ಶೆಟ್ಟಿ ಶಂಭುಗ ಸೇರಿದಂತೆ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.













