ಕಲ್ಪಡ ಸ್ನೇಹಿತರ ಬಳಗದ ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಾಣಿಯೂರು: ಸ್ನೇಹಿತರ ಬಳಗ ಕಲ್ಪಡ ಕೊಡಿಯಾಲ ಇದರ ದಶಮಾನೋತ್ಸವ ಕಾರ್ಯಕ್ರಮವು ನ.14, 15 ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅ 11ರಂದು ಶ್ರೀ ಉಳ್ಳಾಕುಲು ದೈವಸ್ಥಾನ ಕಲ್ಪಡದಲ್ಲಿ ನಡೆಯಿತು.


ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವರಾಮ ಉಪಾಧ್ಯಾಯ ಕಲ್ಪಡ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ನೇಹಿತರ ಬಳಗದ ಅಧ್ಯಕ್ಷರಾದ ಸುರೇಶ್ ಗುತ್ತು, ಶ್ರೀ ಕ್ಷೇತ್ರ ಭಜನಾ ಪರಿಷತ್ ಬೆಳ್ಳಾರೆ ವಲಯದ ಕೋಶಾಧಿಕಾರಿಯಾದ ಪೂರ್ಣಿಮಾ ಉಪಾಧ್ಯಾಯ, ದೈವ ಪಾತ್ರಿಕರು, ಊರಿನ ಗಣ್ಯರು, ಬಳಗದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here