







ಪುತ್ತೂರು : ಪುತ್ತೂರು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ನ ಉಪ್ಪಿನಂಗಡಿ ವಲಯದ ಪೆರಿಯಡ್ಕ ಕಾರ್ಯಕ್ಷೇತ್ರದಲ್ಲಿ ” ನೇಸರ ” ಎಂಬ ಹೊಸ ಜ್ಞಾನವಿಕಾಸ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು.



ಸಭೆಯ ಅಧ್ಯಕ್ಷತೆಯನ್ನು ಸ್ನೇಹ ಸಂಘದ ಸದಸ್ಯರಾದ ಯಶೋಧಾ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಉಪ್ಪಿನಂಗಡಿ ವಲಯದ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಪ್ರಶಾಂತ್ ಇವರು ನೆರವೇರಿಸಿ, ಖಾವಂದರ ಹಾಗೂ ಮಾತೃಶ್ರೀ ಅಮ್ಮನವರು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಬೇಕೆಂದು ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇನ್ನು ಮುಂದೆ ಜ್ಞಾನವಿಕಾಸ ಕೇಂದ್ರದಲ್ಲಿ ನೀವು ಪ್ರತಿಯೊಂದು ವಿಷಯವನ್ನು ಕಲಿಯುತ್ತೀರಿ. ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿ ತುಂಬಾ ಕಲಿತಿದ್ದೇವೆ ಇನ್ನು ಮುಂದೆ ಮಹಿಳೆಯರು ಜ್ಞಾನವಿಕಾಸ ಕಾರ್ಯಕ್ರಮದಿಂದ ಉತ್ತಮ ವಿಚಾರಗಳನ್ನು ಕಲಿತು ಉತ್ತಮ ರೀತಿಯಲ್ಲಿ ಕೇಂದ್ರವನ್ನು ಮುನ್ನಡೆಸಿಕೊಂಡು ನಡೆಯಿರಿ ಎಂದು ಶುಭ ಹಾರೈಸಿದರು.




ವಲಯ ಮೇಲ್ವಿಚಾರಕರದ ಶಿವಪ್ಪ ಎಂಕೆ, ಜ್ಞಾನವಿಕಾಸ ಕಾರ್ಯಕ್ರಮದ ಮೂಲ ಉದ್ದೇಶ ಜ್ಞಾನ ವಿಕಾಸದ ಮೂಲಕ ನಡೆಯುವ ಕಾರ್ಯಕ್ರಮ, ಮಹಿಳೆಯರಿಗೆ ಸಬಲೀಕರಣಕ್ಕೆ ಹೇಗೆ ಪೂರಕವಾಗಿದೆ ಮಹಿಳೆಯರು ಕೇಂದ್ರದಿಂದ ಆ ಉದ್ಯೋಗಿಗಳಾಗಿ ತಮ್ಮ ಜೀವನವನ್ನು ಹೇಗೆ ಅಭಿವೃದ್ಧಿಪಡಿಸಿಕೊಂಡಿದ್ದಾರೆ ಮಾನಸಿಕವಾಗಿ ಆರ್ಥಿಕವಾಗಿ ಎಷ್ಟು ಸದೃಢರಾಗಿದ್ದಾರೆ ಎಂದು ತಿಳಿಸಿ ಮುಂದೆ ಉತ್ತಮ ರೀತಿಯಲ್ಲಿ ನಾನು ವಿಕಾಸ ಕೇಂದ್ರವನ್ನು ನಡೆಸಿಕೊಂಡು ಹೋಗಲು ನಿಮ್ಮೆಲ್ಲರ ಸಹಕಾರ ಬೇಕು. ಉತ್ತಮ ಜ್ಞಾನವಿಕಾಸ ಕೇಂದ್ರದ ಎಂಬ ಹೆಗ್ಗಳಿಕೆಯನ್ನು ನೀವು ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.
ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಆಶಾ ಹರಿಕೃಷ್ಣ, ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಕುಟುಂಬದ ಮಹಿಳೆಯರ ಪಾತ್ರ ಏನು ಹಾಗೂ ಮಹಿಳೆ ತಮ್ಮ ವ್ಯಕ್ತಿತ್ವವನ್ನು ಹೇಗೆ ಬೆಳೆಸಿಕೊಳ್ಳಬೇಕು ಕುಟುಂಬದಲ್ಲಿ ಸಮಾಜದಲ್ಲಿ ಯಾವ ರೀತಿಯಾಗಿ ಬೆಳೆಯಬೇಕು, ಆರ್ಥಿಕವಾಗಿ ಸಾಮಾಜಿಕವಾಗಿ ಹೇಗೆ ಬಲಶಾಲಿ ಆಗಬೇಕು ಎಂಬ ವಿಚಾರಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿ ಹೊಸ ಜ್ಞಾನವಿಕಾಸ ಕೇಂದ್ರಕ್ಕೆ ಶುಭಾಶಯಗಳು ಅನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಸಂಯೋಜಕಿ ಹಾಗೂ ಸದಸ್ಯರಿಗೆ ನೇಸರ ಜ್ಞಾನವಿಕಾಸ ಕೇಂದ್ರದ ದಾಖಲಾತಿಯನ್ನು ಹಸ್ತಾಂತರ ಮಾಡಲಾಯಿತು.ಸೇವಾಪ್ರತಿನಿಧಿ ಮಮತಾ ಸ್ವಾಗತಿಸಿದರು. ಶ್ರೀ ಶಾಸ್ತಾ ಸಂಘದ ಸದಸ್ಯರಾದ ವಿದ್ಯಾ ವಂದನಾರ್ಪಣೆ ಮಾಡಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.










