







ಪುತ್ತೂರು : ಮರಾಠಿ ಸಮಾಜ ಸೇವಾ ಸಂಘ ಗ್ರಾಮ ಸಮಿತಿ ಕೊಳ್ತಿಗೆ-ಪೆರ್ಲಂಪಾಡಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಆಧಾರ್ ಕಾರ್ಡ್ ನೊಂದಣಿ ತಿದ್ದುಪಡಿ ಶಿಬಿರ ಹಾಗೂ ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಅ.11ರಂದು ಪಾಲ್ತಾಡಿ ಅಂಕತಡ್ಕದಲ್ಲಿರುವ ಕೊಳ್ತಿಗೆ ಪ್ರಾ.ಕೃ.ಸಹಕಾರಿ ಸಂಘದ ಶಾಖೆಯ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ,ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿನೋದ್ ರೈ ಪಾಲ್ತಾಡು ಮಾತನಾಡಿ, ಮರಾಠಿ ಸಮಾಜ ಸಂಘವು ಸೇವೆಯಿಂದ ಜನರಿಗೆ ಹತ್ತಿರವಾಗುತ್ತಿದೆ.ತಮ್ಮ ಸಮಾಜಕ್ಕೆ ಮಾತ್ರ ಸೀಮಿತವಾಗದೇ ಎಲ್ಲಾ ಸಮುದಾಯಕ್ಕೂ ಉಪಯೋಗವಾಗುವಂತಹ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.



ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಳ ಮಾತನಾಡಿ,ಮರಾಠಿ ಸಮಾಜ ಸೇವಾ ಸಂಘವು ಸಾರ್ವಜನಿಕ ವಲಯಕ್ಕೆ ದೊಡ್ಡ ಕೊಡುಗೆಯಾಗಿದೆ.ಮರಾಠಿ ಸಮಾಜದ ಉನ್ನತಿಗೆ ಶ್ರಮಿಸುವುದರ ಜತೆಗೆ ಇತರ ಸಮಾಜದವರಿಗೂ ಸೇವೆಗಳನ್ನು ನೀಡುವ ಕಾರ್ಯ ಮಾಡುತ್ತಿದೆ. ಆಧಾರ್ ನೊಂದಣಿಗೆ ಬೇರೆ ಕಡೆಗಳಲ್ಲಿ ದಿನವಿಡೀ ನಿಲ್ಲುವ ಸ್ಥಿತಿ ಇದ್ದು, ಇದರಿಂದಾಗಿ ಮರಾಠಿ ಸೇವಾ ಸಂಘದಿಂದ ಎಲ್ಲರಿಗೂ ಸೌಲಭ್ಯ ಒದಗಿಸುವ ಕಾರ್ಯ ಎಂದರು.
ದ.ಕ.ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ ಮಾತನಾಡಿ,ಸಮಾಜದ ಸಂಘಟನೆಯ ಒಂದು ಗ್ರಾಮ ಸಮಿತಿಯು ಉನ್ನತವಾದ ಕಾರ್ಯಕ್ರಮಗಳನ್ನು ಸತತವಾಗಿ ನಡೆಸಿಕೊಂಡು ಬರಲು ಸಾಧ್ಯ ಎಂಬುದನ್ನು ಕೊಳ್ತಿಗೆ ಪೆರ್ಲಂಪಾಡಿ ಗ್ರಾಮ ಸಮಿತಿ ಕಳೆದ ಹಲವು ವರ್ಷಗಳಿಂದ ತೋರಿಸಿಕೊಟ್ಟಿದೆ ಎಂದರು.
ಅಧ್ಯಕ್ಷತೆಯನ್ನು ಕೊಳ್ತಿಗೆ ಮರಾಠಿ ಸಮಾಜ ಸೇವಾ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಭವಿತ್ ಕುಮಾರ್ ಮಾಲೆತ್ತೋಡಿ ವಹಿಸಿದ್ದರು.ಬಾಳಿಲ ಶಾಖೆಯ ಅಂಚೆ ಪಾಲಕ ಪ್ರಜ್ವಲ್ ಸಿ.ವಿ.ಅವತು ,ಅಂಚೆ ಇಲಾಖೆಯ ವಿವಿಧ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು.
ಪೆರ್ಲಂಪಾಡಿಯ ಅಂಚೆಪಾಲಕ ವೀರಪ್ಪ ಗೌಡ ಪಿ.ಬಿ., ಕೊಳ್ತಿಗೆ ಪ್ರಾ.ಕೃ. ಸ.ಸಂಘದ ಸಿಇಓ ಬಾಲಗಂಗಾಧರ ಕೆ.,ಶಾಖಾ ವ್ಯವಸ್ಥಾಪಕ ಭರತ್ರಾಜ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಬಾಳಿಲ ಶಾಖೆಯ ಅಂಚೆ ಪಾಲಕ ಪ್ರಜ್ವಲ್ ಸಿ.ವಿ ಹಾಗೂ ಸುರೇಶ್ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು.

ಕೊಳ್ತಿಗೆ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಬ್ಬಯ್ಯ ಕೆ.ಪ್ರಸ್ತಾವನೆಗೈದರು. ಮಾಜಿ ಅಧ್ಯಕ್ಷ ಪದ್ಮನಾಭ ಸರಸ್ವತಿಮೂಲೆ ಸ್ವಾಗತಿಸಿದರು.ಮಹಿಳಾ ಘಟಕದ ಸಾಂಸ್ಕೃತಿಕ ಕಾರ್ಯದರ್ಶಿ ಪೂರ್ಣಿಮಾ ಎಂ ವಂದಿಸಿದರು.










