







ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಭೋಜನ ಪಾಕಶಾಲೆ, ಪ್ರಧಾನ ಸೋಪಾನ ಲೋಕಾರ್ಪಣಾ ಕಾರ್ಯಕ್ರಮ ಅ.11ರಂದು ಬೆಳಿಗ್ಗೆ ನಡೆಯಿತು.






ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಅವರು ದೀಪ ಬೆಳಗಿಸಿ ಮಾತನಾಡಿ ನವರಾತ್ರಿಯ ಮೊದಲ ದಿನದಂದು ದುರ್ಗಾಪರಮೇಶ್ವರಿ ದೇವರ ಬೋಜನ ಪಾಕಶಾಲೆ, ಪ್ರಧಾನ ಸೋಪಾನ ಲೋಕಾರ್ಪಣೆಗೊಂಡಿದೆ. 8 ತಿಂಗಳ ಹಿಂದೆ ನಾನು ಈ ಕ್ಷೇತ್ರದ ಭೂಮಿ ಪೂಜೆ ಮಾಡಿದ್ದೆ, ಇಂದು ಅದರ ಉದ್ಘಾಟನೆ ಕೂಡ ನನ್ನ ಪಾಲಿಗೆ ಒದಗಿ ಬಂದಿದೆಯೆಂದರೆ ಅದು ನನ್ನ ಗುರುಹಿರಿಯರು ಮಾಡಿದ ಧರ್ಮದ -ಲ ಎಂದು ಹೇಳಿದರೂ ತಪ್ಪಾಗಲಾರದು. ಈ ಕ್ಷೇತ್ರಕ್ಕೆ ಮುಂದೆಯೂ ನನ್ನ ಸಹಕಾರ ಇದ್ದೇ ಇದೆ. ಇನ್ನು ಕೆಲವೇ ತಿಂಗಳಲ್ಲಿ ಈ ಕ್ಷೇತ್ರಕ್ಕೆ ಅನುದಾನ ನೀಡುವ ಕುರಿತು ಮಾತನಾಡುತ್ತೇನೆ. ಯಾರು ಸಿಗದಿದ್ದರೆ ಮುಖ್ಯಮಂತ್ರಿಗಳ ಜತೆಯಾದರೂ ಮಾತನಾಡಿ ಅನುದಾನ ನೀಡುವುದಾಗಿ ಹೇಳಿದರು. ದೇವರು ಯಾರಿಗೂ ವರ, ಶಾಪ ನೀಡುವುದಿಲ್ಲ, ಅವಕಾಶ ಮಾತ್ರ ನೀಡುತ್ತಾನೆ ಅದನ್ನು ಸದುಪಯೋಗಪಡಿಸಿಕೊಂಡು, ಕ್ಷೇತ್ರಕ್ಕೆ ಕಿಂಚಿತ್ ಸಹಕಾರ ನೀಡಿದರೆ ಮುಂದೆ ಇದು ದೊಡ್ಡ ಕ್ಷೇತ್ರವಾಗಿ ನಂಬಿ ಬಂದ ಭಕ್ತರಿಗೆ ಇಂಬು ನೀಡುವಂತೆ ಆ ತಾಯಿ ಅನುಗ್ರಹಿಸಲಿದ್ದಾಳೆ ಎಂದು ಹೇಳಿ ಶುಭಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ದೇವಸ್ಥಾನ ಎಷ್ಟು ಎತ್ತರವಾಗಿರುತ್ತದೆಯೋ ಅಷ್ಟು ಅದರ ಪಾವಿತ್ರ್ಯತೆ ಜಾಸ್ತಿ ಇರುವುದು. ನಗರಸಭೆಯಿಂದ ಬರುವಂತಹ ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸುವಂತೆ ವಿನಂತಿಸುತ್ತೇನೆ ಎಂದರು.
ಹರಿಪ್ರಸಾದ್ ಹೊಟೇಲ್ನ ಮಾಲಕ ಹರಿನಾರಾಯಣ ಹೊಳ್ಳ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿದೆ, ಸಮಿತಿಯ ಪದಾಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮಂತಹ ದಾನಿಗಳಿಗೆ ಇನ್ನಷ್ಟು ಹೆಚ್ಚು ದಾನ ಕೊಡುವ ಶಕ್ತಿ ಆ ದೇವರು ನಮಗೆ ಒದಗಿಸಿಕೊಡಲಿ ಹಾಗೂ ಕ್ಷೇತ್ರ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಶುಭಹಾರೈಸಿದರು.
ಶ್ರೀದುರ್ಗಾ ಯಕ್ಷಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ನಾಯಕ್ ಪಾಲೆಚ್ಚಾರು ಮಾತನಾಡಿ ನಾನು ದೇವಸ್ಥಾನಕ್ಕೆ ಬರುವ 10 ವರ್ಷಗಳ ಮೊದಲೇ ಇಲ್ಲಿನ ಮಕ್ಕಳ ಮನೆಯಲ್ಲಿ ಯಕ್ಷಗಾನ ತರಬೇತಿ ನೀಡುತ್ತಿದ್ದೆ. ನಂತರ ಪ್ರಸನ್ನ ಬಲ್ಲಾಳ್ ಮುಖಾಂತರ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಇಲ್ಲಿಗೆ ನಾನು ಕೊಟ್ಟಿದ್ದೇನೆ ಎನ್ನುವುದಕ್ಕಿಂತ ಕೊಡಿಸಿದ್ದೇನೆ ಎನ್ನುವುದು ಮುಖ್ಯವಾಗಿದೆ. ಕ್ಷೇತ್ರದಲ್ಲಿ ಹಿರಿಯ-ಕಿರಿಯ ಎಂಬ ಬೇಧ-ಭಾವವಿಲ್ಲ, ಯಾರು ಮನಃಪೂರ್ವಕವಾಗಿ ನೀಡುತ್ತಾನೆಯೋ ಅವನು ದೇವರ ಭಕ್ತ. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ದೇವಿಯ ಕ್ಷೇತ್ರ ಇದಾಗಿದೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಿಗಳಿಂದ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ, ನಾವೆಲ್ಲರೂ ಸೇರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕಾರ್ಯ ಇನ್ನು ಮುಂದೆಯೂ ಆಗಬೇಕು, ಇಲ್ಲಿ ಹಲವು ಕೆಲಸ ಬಾಕಿ ಇದೆ. ಸಭಾಭವನ ಆಗಬೇಕಿದೆ, ಕಾರ್ಯಕ್ರಮ ಮಾಡಲು ವೇದಿಕೆ ಕಟ್ಟುವ ಬಗ್ಗೆ ಯೋಜನೆಯಿದೆ ಎಂದು ಹೇಳಿ ದಾನಿಗಳ ಸಹಕಾರ ಕೋರಿದರು.
ದೇವಳದ ಎಲ್ಲಾ ಚಟುವಟಿಕೆಗಳಲ್ಲಿ ಕ್ರೀಯಾಶೀಲವಾಗಿ ಭಾಗವಹಿಸಿ, ಸಹಕರಿಸುತ್ತಿರುವ ಸಮಿತಿಯ ಜತೆ ಕಾರ್ಯದರ್ಶಿಗಳಾದ ಸುಂದರ ನಾಯ್ಕ ಬೊಳುವಾರು, ಜಯಕಿರಣ್ ಉರ್ಲಾಂಡಿ, ಜತೆ ಕೋಶಾಽಕಾರಿ ಪುಷ್ಪಲತಾ ಬೇಬಿ ಪೂಜಾರಿ ಹಾಗೂ ಅನಂತಕೃಷ್ಣ ರಾವ್ರವರನ್ನು ಗೌರವಿಸಲಾಯಿತು.
ಕ್ಷೇತ್ರದ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಗೋಪಾಲಕೃಷ್ಣ ಹೇರಳೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಽಕಾರಿ ಜಲಜಾಕ್ಷಿ ಹೆಗ್ಡೆ ಪ್ರಾರ್ಥಿಸಿದರು, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬಲ್ಲಾಳ್ ವಂದಿಸಿದರು. ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.
ದಾನಿಗಳಿಗೆ ಗೌರವಾರ್ಪಣೆ:
ಕ್ಷೇತ್ರದ ಅಭಿವೃದ್ಧಿ ಕುರಿತಂತೆ ವಿವಿಧ ರೀತಿಯ ಸಹಕಾರ ನೀಡಿದ ದಾನಿಗಳಾದ ಪ್ರಸಾದ್ ಇಂಡಸ್ಟ್ರೀಸ್ನ ಶಿವಪ್ರಸಾದ್ ಶೆಟ್ಟಿ, ಹರಿಪ್ರಸಾದ್ ಹೊಟೇಲ್ನ ಮಾಲಕ ಹರಿನಾರಾಯಣ ಹೊಳ್ಳ, ಶ್ರೀದುರ್ಗಾ ಯಕ್ಷಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ನಾಯಕ್ ಪಾಲೆಚ್ಚಾರು, ಕಾವು ಶಾಖಾ ಬ್ಯಾಂಕ್ ಆ- ಬರೋಡಾದ ಅಸಿಸ್ಟೆಂಟ್ ಮ್ಯಾನೇಜರ್ ಧನಂಜಯ ರೈ ನಾಲ, ಗಣೇಶ್ ಪ್ರಸಾದ್ ಹೊಟೇಲ್ನ ಮಾಲಕ ಗೋಪಾಲಕೃಷ್ಣ ಹೇರಳೆ, ಪುಟ್ಟಣ್ಣ ನಾಕ್, ಉಪ್ಪಿನಂಗಡಿ ಕೆನರಾ ಬ್ಯಾಂಕ್ನ ಜಯಂತಿ ನಾಕ್, ಜಯಂತಿ ಜನಾದನ ಗೌಡ, ಜಲಜಾಕ್ಷಿ ಹೆಗ್ಡೆರವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.










