







ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಪಮ್ಮಲೆ ಶಾಖೆಯ ವತಿಯಿಂದ ಶಂಸುಲ್ ಉಲಮಾ ಮೌಲೀದ್ ಮತ್ತು ಅನುಸ್ಮರಣಾ ಕಾರ್ಯಕ್ರಮ ಎಸ್ಕೆಎಸ್ಸೆಸ್ಸೆಫ್ ಕಚೇರಿಯಲ್ಲಿ ನಡೆಯಿತು. ಅಬ್ದುಲ್ ಕರೀಂ ಪಿಲಿಪ್ಪುಡೆ ಅಧ್ಯಕ್ಷತೆ ವಹಿಸಿದ್ದರು. ಶಾಕಿರ್ ಫೈಝಿ ಹಾಗೂ ಲುಕ್ಮಾನ್ ಫೈಝಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.



ಶಂಸುಲ್ ಉಲಮಾರವರ ಧಾರ್ಮಿಕ ಸೇವೆ, ಜ್ಞಾನಪ್ರಸಾರ ಹಾಗೂ ಅವರು ಸಮುದಾಯಕ್ಕೆ, ಸಮಾಜಕ್ಕೆ ನೀಡಿರುವ ಅಮೂಲ್ಯ ಕೊಡುಗೆಗಳ ಬಗ್ಗೆ ಸ್ಮರಿಸಲಾಯಿತು.




ಸಂಘಟನೆಯ ಚಟುವಟಿಕೆಗಳು ಹಾಗೂ ಯುವ ಸಮುದಾಯದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಂದೇಶ ನೀಡಲಾಯಿತು. ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಕೋಶಾಧಿಕಾರಿಯಾಗಿ ಆಯ್ಕೆಯಾದ ಸಲಾಂ ಹಾಜಿ ಮೇನಾಲರವರಿಗೆ ಹಾಗೂ ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಆಬಿದ್ ಕುಕ್ಕಾಜೆರವರನ್ನು ಸನ್ಮಾನಿಸಲಾಯಿತು.










