ಪುತ್ತೂರು ಬೊಳುವಾರು ಕ್ಷೇತ್ರದಲ್ಲಿ `ಶ್ರೀರಾಮ ಪಟ್ಟಾಭಿಷೇಕ’ ತಿಂಗಳ ಯಕ್ಷಗಾನ ತಾಳಮದ್ದಳೆ

0

ಪುತ್ತೂರು : ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ದೇವಸ್ಥಾನದಲ್ಲಿ ಕ್ಷೇತ್ರದ ಯಕ್ಷ ಕಲಾ ಪ್ರತಿಷ್ಠಾನದ (ರಿ ) ವತಿಯಿಂದ ನಡೆಸುವ ತಿಂಗಳ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅಕ್ಟೊಬರ್ ತಿಂಗಳಿನ ತಾಳಮದ್ದಳೆ “ಶ್ರೀರಾಮ ಪಟ್ಟಾಭಿಷೇಕ” ಪ್ರಸಂಗವು ಅ.11ರಂದು ಮಧ್ಯಾಹ್ನ ಶ್ರೀಕ್ಷೇತ್ರದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ರಾಜಗೋಪಾಲ ಜೋಶಿ, ಶ್ರೀಪತಿ ನಾಯಕ್ ಅಜೇರು, ಪ್ರವೀಣ್ ಬಲ್ಯಾಯ ಹಾಗೂ ಗುರುದೀಪ್ ನಾಟೆಕಲ್ಲು ಸಹಕರಿಸಿದರು. ಚೆಂಡೆ ಮತ್ತು ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಪ್ರಚೇತ್ ಆಳ್ವ, ಪ್ರಮಥ್, ರಿಷಭ್ ರಾಮ್, ಅನೀಶ್, ಧ್ರುವ, ಸುಧನ್ವ, ಸಮರ್ಥ್, ಶ್ರೀನಿಧಿ, ಜ್ಞಾನಿತ್ ಮತ್ತು ಪ್ರತಿಷ್ಠಾನದ ಇತರ ವಿದ್ಯಾರ್ಥಿಗಳು ಸಹಕರಿಸಿದರು.

ಅರ್ಥಧಾರಿಗಳಾಗಿ ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ನಾ ಕಾರಂತ, ಶಂಕರ ಸಾರಡ್ಕ, ಕೇಶವ ಭಟ್ ಕೇಕಣಾಜೆ, ಜಯರಾಮ ದೇವಸ್ಯ, ಪ್ರಸನ್ನ ಕುಮಾರ್ ಬಲ್ಲಾಳ್, ಜಗನ್ನಾಥ ಪುಣಚ, ಡಾ. ಗೀತಾ ಕುಮಾರಿ ಪಾಲ್ಗೊಂಡು ಸಹಕರಿಸಿದರು. ರಾಮ ಕೆ ಸ್ವಾಗತಿಸಿದರು. ಪ್ರಸನ್ನ ಬಳ್ಳಾಲ್ ಧನ್ಯವಾದಗೈದರು. ತಿಂಗಳ ತಾಳಮದ್ದಳೆಯ ಪ್ರಾಯೋಜಕತ್ವವನ್ನು ಹಿರಿಯ ಭಾಗವತರಾದ ರಾಜಗೋಪಾಲ ಜೋಶಿ ಮತ್ತು ಮನೆಯವರು ವಹಿಸಿ‌ದ್ದು, ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಹಿರಿಯ ಕಲಾವಿದ ಗುಡ್ಡಪ್ಪ ಬಲ್ಯ ಶಾಲು ಹಾಕಿ ಅಭಿನಂದಿಸಿದರು ಮತ್ತು ದೇವಳದ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು. ಪ್ರತಿಷ್ಠಾನದ ಸದಸ್ಯರಾದ, ಅನಂತನಾರಾಯಣ, ಗಣೇಶ್ ಡಿ ಎಸ್, ನವೀನ್ ರೈ ಮೊದಲಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here