







ಕಷ್ಟದೊಂದಿಗೆ ಮೌಲ್ಯಯುತ ಜೀವನ ನಡೆಸಿದವರು- ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್


ಪುತ್ತೂರು: ಪಾಣಾಜೆ ಗ್ರಾಮದ ದೇವಸ್ಯ ನಿವಾಸಿಯಾಗಿದ್ದ, ಪ್ರತಿಷ್ಠಿತ ಪಡುಕುಳ ಯಾದವ ತರವಾಡಿನ ಹಿರಿಯರೂ ಆಗಿದ್ದ ಮಹಾಲಿಂಗ ಮಣಿಯಾಣಿರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆರ್ಲಪದವು ಶ್ರೀದುರ್ಗಾ ಸಭಾಭವನದಲ್ಲಿ ನಡೆಯಿತು.
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಮಾತನಾಡಿ ಮಹಾಲಿಂಗ ಮಣಿಯಾಣಿಯವರು ಕಷ್ಟದ ಜೀವನದೊಂದಿಗೆ ಮೌಲ್ಯಯುತ ಜೀವನ ಮಾಡಿಕೊಂಡವರು. ನಾಲ್ಕು ಕಂಬದ ಮನೆಯಲ್ಲಿ ಬದುಕಿದ ಅವರು ಸಮಾಜಕ್ಕೆ ಏನು ಮಾಡಬೇಕು ಎಂಬುದನ್ನು ಮಾಡಿ ತೋರಿಸಿದ್ದಾರೆ. ಅವಿಭಕ್ತ ಕುಟುಂಬ ಹೇಗೆ ಇರಬೇಕೆಂದು ಎಂದು ಬದುಕಿನಲ್ಲಿ ತೋರಿಸಿದ್ದಾರೆ. ತನ್ನ ಕುಟುಂಬದಲ್ಲಿ ಯಾರಿಗೂ ಭೇದಭಾವ ಮಾಡದೆ ಎಲ್ಲರಿಗೂ ಸಮಾನ ಪ್ರೀತಿ ಕೊಟ್ಟಿದ್ದಾರೆ. ಅವಿದ್ಯಾವಂತರಾದರೂ ಪರಿಪೂರ್ಣ ಜೀವನ ಮಾಡಿದ್ದಾರೆ. ಅವರ ಸಂಸ್ಕಾರ, ಆದರ್ಶ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ನುಡಿನಮನ ಸಲ್ಲಿಸಿದರು.
ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಮೃತರ ಪುತ್ರರಾದ ಕುಂಞಿ ಮಣಿಯಾಣಿ, ಗೋಪಾಲ ಮಣಿಯಾಣಿ, ಶ್ರೀಧರ ಮಣಿಯಾಣಿ, ಶಿವರಾಮ ಮಣಿಯಾಣಿ, ಸೊಸೆಯಂದಿರಾದ ಪ್ರೇಮಾ, ಜಯಂತಿ, ಸರೋಜಿನಿ, ರೇಣುಕಾ, ಪುತ್ರಿಯರಾದ ಬೇಬಿ, ಲಲಿತ, ಪೂರ್ಣಿಮಾ, ಅಳಿಯಂದಿರಾದ ನಾರಾಯಣ ಮಣಿಯಾಣಿ ಕೊಟ್ಟಂಗುಯಿ, ಕುಂಞಿಕೃಷ್ಣ ಮಣಿಯಾಣಿ ತಲೆಪ್ಪಾಡಿ, ಕೃಷ್ಣ ಮಣಿಯಾಣಿ ಅಗಲ್ಪಾಡಿ ಹಾಗೂ ಮೊಮ್ಮಕ್ಕಳು, ಮರಿಮಕ್ಕಳು, ಬಂಧುಗಳು, ಕುಟುಂಬಸ್ಥರು ಉಪಸ್ಥಿತರಿದ್ದರು.













