







ಆಲಂಕಾರು: ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 40ನೇ ಸೇವೆಯಾಗಿ ’ ರುಕ್ಮಾಂಗದ ಚರಿತ್ರೆ’ ಯಕ್ಷಗಾನ ತಾಳಮದ್ದಳೆ ಅ.10ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ಹಿಮ್ಮೇಳದಲ್ಲಿ ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಮುಮ್ಮೇಳದಲ್ಲಿ ಗಣರಾಜ ಕುಂಬ್ಳೆ (ರುಕ್ಮಾಂಗದ), ಜಯರಾಮ ದೇವಸ್ಯ (ಧರ್ಮಾಂಗದ ), ದಿವಾಕರ ಆಚಾರ್ಯ ಹಳೆನೇರೆಂಕಿ (ಮೋಹಿನಿ ), ನಾರಾಯಣ ಭಟ್ ಆಲಂಕಾರು (ಸಂಧ್ಯಾವಳಿ), ಬಾಲಕೃಷ್ಣ ಕೇಪುಳು (ವಿಷ್ಣು ) ಸಹಕರಿಸಿದರು. ರಕ್ಷಿತ್ ರಾಜ್ ಹಾಗೂ ಮನೆಯವರು ಕೊರಂಬಾಡಿ ಆಲಂಕಾರು ಇವರು ಸೇವಾರ್ಥಿಗಳಾಗಿದ್ದಾರೆ. ಆಲಂಕಾರು ದುರ್ಗಾಂಬಾ ಕಲಾ ಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಮಣ್ಯ ರಾವ್ ನಗ್ರಿ ಇವರು ನವರಾತ್ರಿಯ ಉತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಲಾವಿದರು, ಕಲಾಭಿಮಾನಿಗಳು, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.













