ಪುತ್ತೂರು ಶಿವಸದನದಲ್ಲಿ ದಿ. ರತ್ನಮ್ಮ ಶಿವರಾಮ ರಾವ್ ಸ್ಮರಣಾರ್ಥ ಭಜನಾ ಕಾರ್ಯಕ್ರಮ

0

ಪುತ್ತೂರು: ನಗರದ ಮೂರಿನಲ್ಲಿರುವ ಶಿವಸದನ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯದಲ್ಲಿ ಸುಮಾರು ಐದು ವರ್ಷಗಳಿಂದ ನಿವಾಸಿಯಾಗಿದ್ದ ದಿ.ಬಿ. ಕೆ. ರತ್ನಮ್ಮ ಶಿವರಾಮ ರಾವ್ ಅವರ ಆತ್ಮ ಸದ್ಗತಿಗಾಗಿ ಅವರ ಮಗಳು ವಿದ್ಯಾಧರೆ ಬಿ.ಕೆ. ಮತ್ತು ಮೊಮ್ಮಕ್ಕಳು ಪ್ರಾಯೋಜಕತ್ವದಲ್ಲಿ ಭಜನಾ ಕಾರ್ಯಕ್ರಮ ಹಾಗೂ ವಿಶೇಷ ಭೋಜನ ಇತ್ತೀಚೆಗೆ ನಡೆಯಿತು.

ಮಂಗಳೂರಿನ ಶ್ರೀ ಶಶಿಪ್ರಭಾ ಬಾಲಕೃಷ್ಣ ಐತಾಳ್ ದಂಪತಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.ತಬಲಾದಲ್ಲಿ ಹೇಮಂತ್, ಹಾರ್ಮೋನಿಯಂನಲ್ಲಿ ಶಿವಸದನದ ನಿವಾಸಿ ಕುಮಾರಸ್ವಾಮಿ ಸಹಕರಿಸಿದರು.

ಟ್ರಸ್ಟಿನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಸ್ವಾಗತಿಸಿದರು. ರೇಖಾ ಅತಿಥಿಗಳನ್ನು ಪರಿಚಯಿಸಿದರು. ಶಿವಸದನದ ನಿವಾಸಿಗಳು ಹೂ ನೀಡಿ ಗೌರವಿಸಿದರು. ಕೋಶಾಧಿಕಾರಿ ದಿನಕರ್ ರಾವ್ ಧನ್ಯವಾದ ಸಮರ್ಪಿಸಿದರು. ಸಾಮೂಹಿಕವಾಗಿ ಅಷ್ಟಾಕ್ಷರಿ ಮಂತ್ರ ಪಠಿಸಲಾಯಿತು.

ಟ್ರಸ್ಟಿನ ಸದಸ್ಯರು, ಪುತ್ತೂರಿನ ಬಂಧುಗಳು, ಹಿರಿಯರು, ಶಿಕ್ಷಕಿಯರು, ಮಕ್ಕಳು, ಮೆಟ್ರನ್, ಮ್ಯಾನೇಜರ್ ಹಾಗೂ ಶಿವಸದನದ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here