ಡಾ.ನಝೀರ್ ಅಹಮದ್ ಕ್ಲಿನಿಕ್ ನಲ್ಲಿ ಉಚಿತ/ರಿಯಾಯಿತಿ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿ ವೈದ್ಯಕೀಯ ತಜ್ಞ ಡಾ|ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಮಾಸಿಕ ತಪಾಸಣಾ ಶಿಬಿರದಲ್ಲಿ ರಿಯಾಯಿತಿ ದರದಲ್ಲಿ ಥೈರಾಯಿಡ್, ಕೊಲೆಸ್ಟ್ರಾಲ್ ಹಾಗೂ ಉಚಿತ ದೇಹದ ಕೊಬ್ಬು ಮತ್ತು ಸ್ನಾಯುಗಳ ವಿಶ್ಲೇಷಣೆ ಮತ್ತು ಶುಗರ್, HBA1C ಮತ್ತು BMD ಟೆಸ್ಟ್ ಅ.13 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ರವರು ಆಗಮಿಸಿದ ಫಲಾನುಭವಿಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಶ್ರೀಧರ ಕಣಜಾಲು, ಕಾರ್ಯದರ್ಶಿ ಲೋವಲ್ ಮೇವಾಡ, ನಿಯೋಜಿತ ಅಧ್ಯಕ್ಷ ಸುದರ್ಶನ್ ರಾವ್, ಪೂರ್ವಾಧ್ಯಕ್ಷ ವಿ.ಜೆ ಫೆರ್ನಾಂಡೀಸ್, ಹೆರಾಲ್ಡ್ ಮಾಡ್ತಾ ಉಪಸ್ಥಿತರಿದ್ದರು. ಮ್ಯಾನ್ ಕೈಂಡ್ ಫಾರ್ಮಾದ ರಕ್ಷಿತ್ ಎಸ್, ತೌಸೀಫ್, ಲೈನಕ್ಸ್ ಲ್ಯಾಬೋರೇಟರಿಯ ಕೃಷ್ಣ ಪಟೇಲ್, ಮೈಕ್ರೋ ಲ್ಯಾಬ್ಸ್ ನ ಪ್ರಶಾಂತ್ ಜೈನ್ ಹಾಗೂ ನಿರಂಜನ್, ಎರಿಸ್ ಲೈಫ್ ಸೈನ್ಸ್ ನ ವಿಘ್ನೇಶ್ ಬಿ, ಇಂಟಾಸ್ ಫಾರ್ಮ್ ನ ಚರಣ್, ಮೆಕ್ಲಾಯಿಡ್ ಫಾರ್ಮಾದ ವರುಣ್ ಕುಮಾರ್, ಅಗಿಲಾಸ್ ಮತ್ರು ಥೈರೋಕೇರ್ ಲ್ಯಾಬ್ ಸಿಬ್ಬಂದಿ ಹಾಗೂ ಡಾ.ನಝೀರ್ ಅಹಮದ್ ಕ್ಲಿನಿಕ್ ಸಿಬ್ಬಂದಿ ಸಹಕರಿಸಿದರು.

*ಲಿಪಿಡ್ ಫ್ರೊಫೈಲ್-42 ಮಂದಿ
*ಥೈರಾಯಿಡ್-57 ಮಂದಿ
*HBA1C-58 ಮಂದಿ
*ರಕ್ತದಲ್ಲಿನ ಸಕ್ಕರೆ ಪರೀಕ್ಷೆ(ಜಿ)-65 ಮಂದಿ
*ಬಿಎಂಡಿ-55 ಮಂದಿ
*ಯೂರಿಕ್ ಆಸಿಡ್:30 ಮಂದಿ
*ದೇಹದ ಸಂಯೋಜನೆ(BMI)-60 ಮಂದಿ

ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಕಾಲಕಾಲಕ್ಕೆ ತಜ್ಞ ವೈದ್ಯರಿಂದ ತಪಾಸಣೆ ಮಾಡುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಿ. ಕಳೆದ ಹನ್ನೆರಡು ವರ್ಷಗಳಿಂದ ನಮ್ಮ ಈ ಕ್ಲಿನಿಕ್ ನಲ್ಲಿ ರೋಟರಿ ಪುತ್ತೂರು ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳು ನಡೆಯುತ್ತಾ ಬಂದಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
-ಡಾ.ನಝೀರ್ ಅಹಮದ್, ವೈದ್ಯಕೀಯ ಹಾಗೂ ಮಧುಮೇಹ ತಜ್ಞರು

LEAVE A REPLY

Please enter your comment!
Please enter your name here