







ಕಾಣಿಯೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಸುದೀರ್ಘ 25 ವರ್ಷಗಳ ಯಶಸ್ವಿ ಸಾರ್ವಜನಿಕ ಆಡಳಿತವನ್ನು ಪೂರೈಸಿದ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಒಂದು ತಿಂಗಳ ಸೇವಾ ಚಟುವಟಿಕೆಯ ಅಂಗವಾಗಿ, 2047 ವಿಕಸಿತ ಭಾರತ ಸಂಕಲ್ಪದಡಿ ಸೇವ ಪಾಕ್ಷಿಕದ ಪ್ರಯುಕ್ತ ದೇಶದ ಪ್ರಗತಿಗಾಗಿ ಮೋದಿ ಸಾಧನೆಯನ್ನು ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುವ ಅಭಿಯಾನವು ಬೆಳಂದೂರಿನಲ್ಲಿ ಅ 13ರಂದು ನಡೆಯಿತು. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಮಂಡಲ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ದೆಂತಾರು, ಸುಳ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ, ಜಿ.ಪಂ.ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ತಾ. ಪಂ ಮಾಜಿ ಸದಸ್ಯೆ ಲಲಿತಾ ಈಶ್ವರ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ಅಬೀರ, ಬೆಳಂದೂರು ಶಕ್ತಿ ಕೇಂದ್ರ ಪ್ರಮುಖ್ ಜಯಂತ ಅಬೀರ, ಸವಣೂರು ಸಿ.ಎ ಬ್ಯಾಂಕ್ ನಿರ್ದೇಶಕಿ ನಿರ್ಮಲ ಕೇಶವ ಅಮೈ, ಬೆಳಂದೂರು ಗ್ರಾ. ಪಂ ಮಾಜಿ ಅಧ್ಯಕ್ಷೆ ಉಮೇಶ್ವರಿ ಅಗಳಿ, ಲೋಕೇಶ್ ಬಿ. ಎನ್ ಬರೆಪ್ಪಾಡಿ, ವಿಜೇತ್ ಮುಂಡಾಳ, ಚಂಪಾ ಕುಶಾಲಪ್ಪ, ಆನಂದ ಕೂಂಕ್ಯ, ಕುಶಾಲಪ್ಪ ಗೌಡ ಅಬೀರ, ಶೋಧನ್ ಕೆಲಂಬಿರಿ ಹಾಗೂ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಪ್ರಮುಖರು, ಬೂತ್ ಸಮಿತಿ ಪದಾಧಿಕಾರಿಗಳು ಹಾಗೂ ಪಕ್ಷದ ಹಿತೈಷಿಗಳು ಉಪಸ್ಥಿತರಿದ್ದರು.


ಬೀದಿ ನಾಟಕ ಪ್ರದರ್ಶನ:
ಮೋದಿ 25 ವರ್ಷಗಳ ಸಾರ್ವಜನಿಕ ಆಡಳಿತ ಸಂಭ್ರಮದ ಪ್ರಯುಕ್ತ ಬೀದಿ ನಾಟಕ ಮೂಲಕ ಜನಜಾಗೃತಿ ಅಭಿಯಾನದಲ್ಲಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ ಕುಸುಮಾಧರ ಅವರ ನೇತೃತ್ವದಲ್ಲಿ ಸುಳ್ಯ ನಗರ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾರಾಯಣ, ಸುಳ್ಯ ಸಿ.ಎ ಬ್ಯಾಂಕ್ ನಿರ್ದೇಶಕ ಕೇಶವ, ರಂಗಭೂಮಿ ಕಲಾವಿದರಾದ ರಾಜು, ಪುಷ್ಪರಾಜ್ ಏನೆಕಲ್ಲು, ದುಷ್ಯಂತ್ ಕಂಜಿಪಿಲಿ, ಚಿನ್ಮಯಿ ಮರ್ಕಂಜ. ಚಿದಾನಂದ ಅವರ ತಂಡ ಬೀದಿ ನಾಟಕ ಪ್ರದರ್ಶನ ನೀಡಿತು.













