ಜೆಕೆ ಟೂರ್ ಟ್ರಾವೆಲ್ಸ್ ವತಿಯಿಂದ ಅ. 16ರಂದು ಧಾರ್ಮಿಕ ಕ್ಷೇತ್ರಗಳ ಪ್ರವಾಸ

0

ಪುತ್ತೂರು : ಜೆಕೆ ಟೂರ್ ಟ್ರಾವೆಲ್ಸ್ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಅಕ್ಟೋಬರ್ 16ರಂದು ಒಂದು ದಿನದ ಪ್ರವಾಸ ಆಯೋಜಿಸಲಾಗಿದೆ.

ಪ್ರವಾಸದ ಅಂಗವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಾರ್ಕಳದ ಆನೆಕೆರೆ ಬಸದಿ, ಕಮಲಶಿಲೆಯ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸುಪಾರ್ಶ್ವ ಗುಹೆ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾಪು ಮಾರಿಗುಡಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಾಗುವುದು.

ಇದಲ್ಲದೆ, ಭಕ್ತರ ಅನುಕೂಲಕ್ಕಾಗಿ ಪ್ರತಿದಿನ ತಿರುಪತಿ ಪ್ರವಾಸಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಮುಡಿಪು ಕ್ಷೇತ್ರಕ್ಕೆ ತೆರಳಲು ಬಯಸುವ ಭಕ್ತರಿಗೂ ಪ್ರವಾಸದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಪ್ರವಾಸದ ಆಯೋಜಕ ಜಯರಾಮ್ ಕುಲಾಲ್ ತಿಳಿಸಿದ್ದಾರೆ.
ಪ್ರವಾಸದ ಕುರಿತು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 99452 77507 ಅಥವಾ 9108550105 ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here