







ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕದ ಸಮಾಜಮುಖಿ ಸಂಘಟನೆ ಶ್ರೀ ವಿಷ್ಣು ಯುವಶಕ್ತಿ ಬಳಗ ತನ್ನ ನೆರವಿನ ಹಸ್ತದ ಮೂಲಕ ಮತ್ತೆ ಮಾನವೀಯತೆ ಮೆರೆದಿದೆ.ಸಂಘಟನೆಯ ಸಕ್ರಿಯ ಸದಸ್ಯರಾದ ಅಶೋಕ್ ಪೆರ್ನೆ ಅವರ ತಾಯಿ ವಾರಿಜ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಸಂಘಟನೆಯ ವತಿಯಿಂದ ರೂ. 20,000 (ಇಪ್ಪತ್ತು ಸಾವಿರ ರೂಪಾಯಿ) ಆರ್ಥಿಕ ನೆರವನ್ನು ನೀಡಲಾಯಿತು.


ಸಂಘಟನೆಯ ಪದಾಧಿಕಾರಿಗಳು ಅಶೋಕ್ ಪೆರ್ನೆ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ, ವಾರಿಜ ಅವರ ಆರೋಗ್ಯ ವಿಚಾರಿಸಿ, ಕುಟುಂಬಕ್ಕೆ ಧೈರ್ಯ ತುಂಬಿದರು. ಬಳಿಕ ಸಹಾಯ ಧನದ ಚೆಕ್ ಅನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ಯತೀಶ್ ಮಡಿವಾಳ ಕೋಡಿಯಡ್ಕ, ಉಪಾಧ್ಯಕ್ಷ ನವೀನ್ ಮಜ್ಜಾರ್, ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸ್ವಾಮೀನಗರ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ. ಮಯೂರ ಉಪಸ್ಥಿತರಿದ್ದರು.



ಸಂಘಟನೆಯು ಸಂಕಷ್ಟದಲ್ಲಿರುವ ಸದಸ್ಯರ ಕುಟುಂಬಕ್ಕೆ ತಕ್ಷಣ ಸ್ಪಂದಿಸಿ ಆಸರೆಯಾಗಿ ನಿಂತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.










