







ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ‘ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ’ದ ವತಿಯಿಂದ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ, ವಿಶೇಷ ಚೇತನರಾದ ಮೋಹನ್ ದರ್ಬೆತ್ತಡ್ಕ ಅವರ ಮನೆಗೆ ಸಂಘದ ಸದಸ್ಯರು ಭೇಟಿ ನೀಡಿ ಮಲ್ಲಿಗೆ ಗಿಡಗಳನ್ನು ವಿತರಿಸಿದರು.


ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಶ್ರೀ ವಿಷ್ಣು ಯುವಶಕ್ತಿ ಬಳಗವು ವಿಶೇಷ ಚೇತನರ ಆರ್ಥಿಕ ಸ್ವಾವಲಂಬನೆಗೆ ಕೈಜೋಡಿಸಿರುವುದು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ಗಿಡಗಳನ್ನು ಸ್ವೀಕರಿಸಿದ ಮೋಹನ್ ದರ್ಬೆತ್ತಡ್ಕ ಅವರು ಸಂಘದ ಕಾಳಜಿಗೆ ಕೃತಜ್ಞತೆ ಸಲ್ಲಿಸಿದರು.



ಈ ಸಂದರ್ಭದಲ್ಲಿ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷರಾದ ಯತೀಶ್ ಮಡಿವಾಳ ಕೋಡಿಯಡ್ಕ, ಉಪಾಧ್ಯಕ್ಷರಾದ ನವೀನ್ ಮಜ್ಜಾರ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಸ್ವಾಮೀನಗರ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ. ಮಯೂರ ಉಪಸ್ಥಿತರಿದ್ದು, ಸ್ವ ಉದ್ಯೋಗಕ್ಕೆ ಶುಭ ಹಾರೈಸಿದರು.










