







ಉತ್ತಮ ಭವಿಷ್ಯತ್ ಹೊಂದಿದ ಉದ್ಯಮ- ರವಿಕೃಷ್ಣ ಡಿ. ಕಲ್ಲಾಜೆ ಸ್ಥಳೀಯವಾಗಿ ಬೆಳೆದು ಅಭಿವೃದ್ಧಿಯಾಗಿ- ಡಾ.ಯು.ಪಿ.ಶಿವಾನಂದ
ಅಪ್ಗ್ರೇಡ್ ಆದಾಗ ವ್ಯವಸ್ಥೆಯೂ ಬೆಳೆಯುತ್ತದೆ- ಮಹದೇವ ಶಾಸ್ತ್ರಿ ಮಣಿಲ
ಯುಪಿಎಸ್ ಬ್ಯಾಟರಿ ಉದ್ಯಮ ಇಕೋ ಫ್ರೆಂಡ್ಲಿ- ಕಿರಣ್ ಶೆಟ್ಟಿ
ನವರಾತ್ರಿಯಲ್ಲಿ ಶಕ್ತಿಯ ಉದ್ಯಮ ಆರಂಭ- ಉದಯ ಕುಮಾರ್ ಭಟ್


ಪುತ್ತೂರು: ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ವ್ಯವಹರಿಸುತ್ತಿರುವ ಸನ್ಸ್ಕಾರ್ ಸಿಸ್ಟಮ್ ಇಂಡಿಯಾ ಕಂಪೆನಿಯ ನೂತನ ಉತ್ಪನ್ನಗಳಾದ ಇನ್ವರ್ಟರ್ ಹಾಗೂ ಲಿಥಿಯಂ ಬ್ಯಾಟರಿಗಳ “ಯುಪಿಎಸ್ ಫೋರ್ ಮಿ” (UPS4ME) ನೂತನ ಮಳಿಗೆ ಅ.14ರಂದು ಪುತ್ತೂರು ಜೇನು ವ್ಯವಸಾಯಗಾರರ ಸಹಕಾರ ಸಂಘದ ಕಟ್ಟಡದಲ್ಲಿ ಶುಭಾರಂಭಗೊಂಡಿತು.




ಉತ್ತಮ ಭವಿಷ್ಯತ್ ಹೊಂದಿದ ಉದ್ಯಮ:
ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಪುತ್ತೂರು ವರ್ತಕರ ಸಂಘದ ಅಧ್ಯಕ್ಷರೂ ಆಗಿರುವ ರವಿಕೃಷ್ಣ ಡಿ. ಕಲ್ಲಾಜೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಪವರ್ ಮತ್ತು ಸ್ಟೋರೇಜ್ ಇಂಡಸ್ಟ್ರೀ ಉತ್ತಮ ಭವಿಷ್ಯತ್ ಇರುವ ಇಂಡಸ್ಟ್ರೀ ಆಗಿದೆ. ಸಹೋದರಿಬ್ಬರು ಆರಂಭಿಸಿದ ಶೋರೂಮ್ನಲ್ಲಿ ಯುಪಿಎಸ್, ಲಿಥಿಯಂ ಬ್ಯಾಟರಿಗಳ ಉತ್ಪನ್ನ ಇದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿದರೆ ಉದ್ಯಮ ಯಶಸ್ಸು ಸಾಧ್ಯ. ನಮ್ಮ ವರ್ತಕ ಸಂಘದಿಂದ ನಿಮಗೆ ಸ್ವಾಗತ. ನಿಮ್ಮ ಇಂಡಸ್ಟ್ರೀ ಬೆಳೆದರೆ ನಾವೂ ಬೆಳೆದ ಹಾಗೆ. ನಿಮಗೆ ದೇವರು ಒಳ್ಳೆಯ ಅನುಗ್ರಹ ನೀಡಲಿ ಎಂದು ಶುಭಹಾರೈಸಿದರು.
ಸ್ಥಳೀಯವಾಗಿ ಬೆಳೆದು ಅಭಿವೃದ್ಧಿಯಾಗಿ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮಾತನಾಡಿ ಹಿರಿಯರನ್ನು ಯಾರು ಗೌರವಿಸುತ್ತಾರೋ ಅವರನ್ನು ಸಮಾಜ ಗೌರವಿಸುತ್ತದೆ. ಇಂದು ಹಳ್ಳಿಯ ಪ್ರತೀ ಮನೆಯಲ್ಲಿ ತಂದೆ ತಾಯಿ ಮಾತ್ರ ಇರುತ್ತಾರೆ. ಮಕ್ಕಳು ಇತರ ಊರಿನಲ್ಲಿ ಉದ್ಯೋಗ ಅಥವಾ ಉದ್ಯಮದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರೆಲ್ಲರೂ ತಮ್ಮ ಊರಿಗೆ ಬರಬೇಕು. ಊರಿನ ಸಂಪರ್ಕದೊಂದಿಗೆ ಸ್ಥಳೀಯವಾಗಿ ಬೆಳೆಯಬೇಕು. ಊರಿನ ಅವಶ್ಯಕತೆ ಪೂರೈಸಿ ಅಭಿವೃದ್ಧಿ ಹೊಂದಬೇಕು. ಪವರ್ನ ಅವಶ್ಯಕತೆ ಎಲ್ಲರಿಗೂ ಬೇಕು. ವಿದ್ಯುತ್, ನೀರು, ಸಾರಿಗೆ ಅಭಿವೃದ್ಧಿಗೆ ಮುಖ್ಯ ಬೇಕು ಎಂದರು. ನಿಮ್ಮ ಅಭಿವೃದ್ಧಿಗೆ ಸುದ್ದಿ ಪತ್ರಿಕೆಯ ಸಹಕಾರ ಇದೆ. ನಿಮ್ಮ ಉದ್ಯಮದ ವಿಸ್ತರಣೆಗೆ ನಾವೂ ಕೈಜೋಡಿಸುತ್ತೇವೆ. ನಮ್ಮ ನೆಟ್ವರ್ಕ್ ಉಪಯೋಗಿಸಿಕೊಳ್ಳಿ ಎಂದು ಹೇಳಿ ಶುಭಹಾರೈಸಿದರು.

ಅಪ್ಗ್ರೇಡ್ ಆದಾಗ ನಮ್ಮ ವ್ಯವಸ್ಥೆ ಬೆಳೆಯುತ್ತದೆ:
ಪುತ್ತೂರು ವರ್ತಕರ ಸಂಘದ ನಿರ್ದೇಶಕ ಮಹದೇವ ಶಾಸ್ತ್ರಿ ಮಣಿಲ ಮಾತನಾಡಿ ಗ್ರಾಹಕರ ಸೇವಾ ಮನೋಭಾವದೊಂದಿಗೆ ಇನ್ವರ್ಟರ್ ಯುಪಿಎಸ್ ಉತ್ಪನ್ನಗಳ ಮಾರಾಟ ಆರಂಭಿಸಿದ್ದೀರಿ. ಇದರಲ್ಲಿ ಯಶಸ್ಸು ಖಂಡಿತಾ ಸಿಗುತ್ತದೆ. ಇಂದು ಪವರ್ ಪೂರೈಕೆಯಲ್ಲಿ ಅಪ್ಗ್ರೇಡ್ ಆಗುತ್ತಾ ಬಂದಿದೆ. ಅಪ್ಗ್ರೇಡ್ ಆದಾಗ ನಮ್ಮ ವ್ಯವಸ್ಥೆಯೂ ಬೆಳೆಯುತ್ತದೆ. ನಿಮ್ಮ ಯೋಚನೆ, ಯೋಜನೆಗೆ ಯಶಸ್ಸಿನ ದಾರಿ ಸಿಗಲಿ ಎಂದು ಹೇಳಿ ಶುಭಹಾರೈಸಿದರು.
ಯುಪಿಎಸ್ ಬ್ಯಾಟರಿ ಉದ್ಯಮ ಇಕೋ ಫ್ರೆಂಡ್ಲಿಯಾಗಿದೆ:
ಕರ್ಜೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕಿರಣ್ ಶೆಟ್ಟಿ ಮಾತನಾಡಿ ಹೆಚ್ಚಿನ ಉದ್ಯಮಗಳು ಪರಿಸರ, ಕಮ್ಯುನಿಟಿಗೆ ಮಾರಕವಾಗಿರುತ್ತದೆ. ಆದರೆ ನೀವು ಆರಂಭಿಸಿದ ಉದ್ಯಮ ಇಕೋ ಫ್ರೆಂಡ್ಲಿಯಾಗಿದೆ. ಶಕ್ತಿಯನ್ನು ವರಪ್ರಸಾದವಾಗಿ ಜನರಿಗೆ ನೀಡಲು ಸಿದ್ಧವಾಗಿದ್ದಾರೆ. ಜನರಿಗೆ ಯುಪಿಎಸ್ ಅತೀ ಅಗತ್ಯವಾದ ಉತ್ಪನ್ನವಾಗಿದೆ ಎಂದ ಅವರು ಈ ಸಂಸ್ಥೆ ಉತ್ತುಂಗವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ಶಕ್ತಿ ಆರಾಧನೆಯ ನವರಾತ್ರಿಯಲ್ಲಿ ಶಕ್ತಿಯ ಉದ್ಯಮ ಆರಂಭ:
ಕೃಷಿಕ ಉದಯ ಕುಮಾರ್ ಭಟ್ ಮಾತನಾಡಿ ಬೆಳೆಯುವಂತಹ ಪುತ್ತೂರಿಗೆ ಇಂತಹ ಉದ್ಯಮ ಬರುತ್ತಿರುವುದು ನಮಗೆ ಹೆಮ್ಮೆಯಾಗಿದೆ. ರವಿ ಮತ್ತು ಪ್ರಸಾದ್ ಅವರು ಬಾಲ್ಯದಲ್ಲಿಯೇ ಸ್ವಾಭಿಮಾನದ ಚಿಂತನೆ ಹೊಂದಿದವರು. ಆದುದರಿಂದ ಸ್ವಂತ ಉದ್ಯಮ ಆರಂಭಿಸಿದ್ದಾರೆ. ನವರಾತ್ರಿ ಎಂಬುದೇ ಒಂದು ಪವರ್. ಎಲ್ಲರೂ ಶಕ್ತಿಯನ್ನು ಆರಾಧನೆ ಮಾಡುವವರು. ಈ ಸಮಯದಲ್ಲಿಯೇ ಪವರ್ ಆಗಿರುವ ಯುಪಿಎಸ್ ಬ್ಯಾಟರಿಯೊಂದಿಗೆ ವಾಟರ್ ಫಿಲ್ಟರ್ ಉತ್ಪನ್ನಗಳ ಮಾರಾಟ ಆರಂಭಿಸಿದ್ದಾರೆ. ಇದು ಮುಂದೆ ಉತ್ತಮವಾಗಿ ಬೆಳೆದು ನೂರಾರು ಜನರಿಗೆ ಉದ್ಯೋಗ ದೊರೆಯಲಿ ಎಂದರು.
ಗ್ರಾಹಕರ ಸೇವೆಯೇ ಮೊದಲ ಆದ್ಯತೆ:
ಮಾಲಕರಾದ ರವಿಶಂಕರ್ ಮಾತನಾಡಿ ಹತ್ತೂರು ಬಿಟ್ಟರೂ ಪುತ್ತೂರು ಬಿಡ ಎಂಬ ಮಾತಿದೆ. ಪರ ಊರಿಗೆ ಹೋದವರು ಪುತ್ತೂರಿಗೆ ಬಂದೇ ಬರುತ್ತಾರೆ. ಇಲ್ಲಿಯ ವಾತಾವರಣ, ಸಂಸ್ಕೃತಿ ಅವರನ್ನು ಬರಮಾಡಿಕೊಳ್ಳುತ್ತದೆ ಎಂದರು. 2012ರಿಂದ ಬೆಂಗಳೂರಿನಲ್ಲಿ ಉದ್ಯಮ ಆರಂಭಿಸಿದ್ದಾರೆ. 2 ವರ್ಷದಿಂದ ಯುಪಿಎಸ್ ಉದ್ಯಮ ಆರಂಭಿಸಿದ್ದೇವೆ. ಗ್ರಾಮೀಣ ಭಾಗದ ಜನರ ಬೇಡಿಕೆ ಅರಿತು ಗ್ರಾಹಕರಿಗೆ ಸೇವೆ ನೀಡುವುದೇ ಮೊದಲ ಆದ್ಯತೆ ಎಂಬ ಬದ್ಧತೆ ಹೊಂದಿದ್ದೇವೆ. ಯುಪಿಎಸ್, ಲಿಥಿಯಂ ಬ್ಯಾಟರಿ, ವಾಟರ್ಫಿಲ್ಟರ್ ಉತ್ಪನ್ನ ಕೂಡ ನೀಡಲಿದ್ದೇವೆ. ಇದಕ್ಕಾಗಿ ಎಕ್ಸ್ಕ್ಲೂಸಿವ್ ಶೋರೂಮ್ ಪ್ರಾರಂಭಿಸಿದ್ದೇವೆ. ನಮ್ಮ ಊರಿನವರಿಗೆ ನಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದೇವೆ.
ರವಿ ನಾರಾಯಣ ಪಟ್ಟಾಜೆ, ಹರಿಶಂಕರ್, ಸಾಫ್ಟ್ವೇರ್ ಉದ್ಯಮಿ ತೇಜಸ್, ಕೋಕೋಗುರು ಮಾಲಕ ಶಿವಶಂಕರ ಭಟ್, ಮಾಲಕರ ತಂದೆತಾಯಿಯರಾದ ಸುಬ್ರಹ್ಮಣ್ಯ ಭಟ್ ಮತ್ತು ಸುಮಂಗಲ ದಂಪತಿ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು. ಸನ್ಸ್ಕಾರ್ ಸಮೂಹ ಸಂಸ್ಥೆಗಳ ಸಿಬ್ಬಂದಿಗಳು ಸಹಕರಿಸಿದರು. ಮಳಿಗೆಯ ಮಾಲಕರಾದ ಕೃಷ್ಣಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ವಂದಿಸಿದರು.
ನಮ್ಮ ದೊಡ್ಡ ಪ್ರಯಾಣದ ಮೊದಲ ಹೆಜ್ಜೆ ನಾವು ಹಲವಾರು ಉದ್ಯೋಗ ಮಾಡಿ 2012ರಲ್ಲಿ ಸನ್ಸ್ಕಾರ್ ಸಿಸ್ಟಮ್ ಇಂಡಿಯಾ ಪ್ರೈ.ಲಿ. ಕಂಪೆನಿ ಆರಂಭ ಮಾಡಿದ್ದೇವೆ. ಪವರ್ ಪ್ಲಾಂಟ್ಸ್, ಮೈನಿಂಗ್, ಆಯಿಲ್ ರಿಫೈನರೀಸ್, ಫರ್ಟಿಲೈಜರ್ ಮುಂತಾದ ಕಂಪೆನಿಗಳಿಗೆ ನಿರ್ವಹಣಾ ಬಿಡಿಭಾಗಗಳ ಪೂರೈಕೆ ಮಾಡುತ್ತಿದ್ದೆವು. ದೇವರ ಅನುಗ್ರಹದಿಂದ ಕಂಪೆನಿ ಯಶಸ್ವಿಯಾಗಿ ಕಾರ್ಯಚರಿಸುತ್ತಿತ್ತು. ಒಳ್ಳೆಯ ಸೇವೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ. ಎರಡು ಮೂರು ವರ್ಷಗಳಿಂದ ಹಳ್ಳಿ ಹಳ್ಳಿಯ ಜನರಿಂದ ಅಭಿಪ್ರಾಯ ಪಡೆದು ಅವರ ಬೇಡಿಕೆಯಂತೆ ಯುಪಿಎಸ್ ಬ್ಯಾಟರಿ ಉದ್ಯಮ ಆರಂಭಿಸಿದ್ದೇವೆ. ಕಾಸರಗೋಡು, ಪುತ್ತೂರು, ದಾವಣಗೆರೆಯಲ್ಲಿ ಮೊದಲ ಮೂರು ಶಾಖೆಗಳನ್ನು ಆರಂಭಿಸುವ ಚಿಂತನೆ ಹೊಂದಿದ್ದು ಇಂದು ಪುತ್ತೂರಿನಲ್ಲಿ ಆರಂಭವಾಗಿದೆ. ನಮ್ಮ ದೊಡ್ಡ ಪ್ರಯಾಣದ ಮೊದಲ ಹೆಜ್ಜೆಯ ಪ್ರಾರಂಭಿಕ ಕ್ಷಣಗಳಾಗಿದೆ ಉತ್ತಮ ಸೇವೆ ನೀಡಲು ಬದ್ಧರಾಗಿದ್ದೇವೆ ನಿಮ್ಮ ಸಹಕಾರ ಇರಲಿ. ಕೃಷ್ಣಪ್ರಸಾದ್ ಮಾಲಕರು, ಯುಪಿಎಸ್ ಫೋರ್ ಮಿ ಮಳಿಗೆ
UPS4ME ಶೋರೂಮ್ನಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಯುಪಿಎಸ್ ಹಾಗೂ ಪವರ್ ಬ್ಯಾಕಪ್ಗಾಗಿ ಉತ್ತಮ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿದೆ. ಹೆಚ್ಚು ದಕ್ಷತೆ, ದೀರ್ಘ ಬಾಳಿಕೆ ಮತ್ತು ಸ್ಮಾರ್ಟ್ ಪವರ್ ಬ್ಯಾಕಪ್ ದೊರೆಯಲಿದೆ. ಮನೆ, ಕಛೇರಿ, ಅಂಗಡಿ, ಕೈಗಾರಿಕೆಗಳಿಗೆ ಸೋಲಾರ್ ವ್ಯವಸ್ಥೆ ಟೆಲಿಕಾಂ ಉಪಯೋಗಗಳಿಗೆ ಸೂಕ್ತವಾಗಿದ್ದು, ಅತ್ಯುನ್ನತ ವಿಶ್ವಾಸಾರ್ಹತೆಯೊಂದಿಗೆ, ನವೀನ ತಂತ್ರಜ್ಞಾನ, ಸುರಕ್ಷಿತ ಮತ್ತು ಸ್ಥಿರವಾದ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೆ ನೀರು ಶುದ್ಧೀಕರಣ ಯಂತ್ರವೂ ಗ್ರಾಹಕರಿಗೆ ಲಭ್ಯವಿದೆ.










