ಹರ್ಷಿತ್ ಜ್ಯುವೆಲರ್ಸ್‌ನಿಂದ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪರಿಚಯಿಸಿರುವ ದಿ.ಹೌಸ್ ಆಫ್ ಆರಾಧನಾ ವಿಶಿಷ್ಠ ಕಲಾಕೃತಿಗಳ ಶುಭಾರಂಭ-ಅನಾವರಣ

0

ಪುತ್ತೂರು: ಹರ್ಷಿತ್ ಜ್ಯುವೆಲರ್ಸ್‌ ಮತ್ತು ಹೆಚ್.ಆರ್ ಕ್ರಿಯೇಷನ್ಸ್ ಅರ್ಪಿಸುವ ದಿ. ಹೌಸ್ ಆಫ್ ಆರಾಧನಾ ಇದರ ವತಿಯಿಂದ ಆಧುನಿಕ ತಂತ್ರಜ್ಞಾನದೊಂದಿಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪರಿಚಯಿಸಿರುವ ಚಿನ್ನ, ಬೆಳ್ಳಿ, ಪಂಚಲೋಹ, ಹಿತ್ತಾಳೆ ಸೇರಿದಂತೆ ವಿವಿಧ ಲೋಹಗಳಲ್ಲಿ ದೇವರು, ದೈವಗಳ ವಿಗ್ರಹ ಹಾಗೂ ವೈವಿಧ್ಯಮಯ ಕಲಾಕೃತಿಗಳ ಶುಭಾರಂಭ ಹಾಗೂ ಅನಾವರಣ ಕಾರ್ಯಕ್ರಮಗಳು ಅ.14ರಂದು ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ವಿವಿಧ ಲೋಹಗಳ ಪ್ರತಿಮೆ, ಆಕೃತಿಗಳ ರಚನೆಯಲ್ಲಿ ಹೊಸ ಪ್ರಯೋಗ-ಪಂಜಿಗುಡ್ಡೆ ಈಶ್ವರ ಭಟ್:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ಲೋಹಗಳ ಪ್ರತಿಮೆ, ಆಕೃತಿಗಳ ರಚನೆಯಲ್ಲಿ ಹರ್ಷಿತ್ ಜ್ಯುವೆಲರ್ಸ್‌ ಮಳಿಗೆ ಹೊಸ ಪ್ರಯೋಗ ಮಾಡಿದ್ದಾರೆ. ಅವರು ತಯಾರಿಸಿದ ವಿನೂತನ ಕುಸುರಿ ಕೆಲಸದ ಪೆಂಡೆಂಟ್ ನನ್ನಲ್ಲಿದೆ. ಲೋಹಗಳ ಪ್ರತಿಮೆ, ಪ್ರಭಾವಳಿ ಮಾಡುವುದು ಸುಲಭದ ಕಾರ್ಯವಲ್ಲ. ಅಂತಹ ಸಾಧನೆ ಮಾಡಿದ ಗಂಗಾಧರ ಆಚಾರ್ಯ ಸಮಾಜಕ್ಕೆ ಅರ್ಪಿಸಿದ್ದಾರೆ. ಇವರ ವೃತ್ತಿಯು ಸಮಾಜದ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗಲಿದ್ದು ಇವರ ಉದ್ಯಮ ಅಭಿವೃದ್ಧಿತ್ತ ಸಾಗಲಿ ಎಂದು ಹೇಳಿದ ಅವರು ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಕೊಡುಗೆ ನೀಡುತ್ತಿರುವ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಪುತ್ತೂರಿನ ಚಿನ್ನದ ಮನುಷ್ಯ ಎಂದು ಹೇಳಿದರು.‌



ಲೋಕಲ್ ಫಾರ್ ಓಕಲ್‌ನ್ನು ಪ್ರಧಾನಿಯವರಿಗಿಂತಲೂ ಹಿಂದೆಯೇ ಪರಿಚಯಿಸಿದವರು-ಸಂಜೀವ ಮಠಂದೂರು
ಲಾಂಛನ ಬಿಡುಗಡೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಲೆ ಮತ್ತು ನೈಪುಣ್ಯತೆಯನ್ನು ಪರಿಚಯಿಸುವ ಕಾರ್ಯ ಗಂಗಾಧರ ಆಚಾರ್ಯ ಮೂಲಕ ಆಗಿದ್ದು ಹೊಸ ತನವನ್ನು ಮೈಗೂಡಿಸಿಕೊಂಡು ಯುವ ಪೀಳಿಗೆಯನ್ನು ಆಕರ್ಷಿಸುವ ಕಾರ್ಯವಾಗಿದೆ. ಸ್ವರ್ಣೋದ್ಯಮದಲ್ಲಿ ಅನ್ವೇಷಕರಾಗಿರುವ ಗಂಗಾಧರ ಆಚಾರ್ಯ ಅವರು ವೃತ್ತಿಯ ಜೊತೆಗೆ ಕೌಶಲ್ಯ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದಾರೆ. ಚಿನ್ನಾಭರಣ ತಯಾರಿಸುವ ತರಬೇತಿ ನೀಡುವ ಮೂಲಕ ಲೋಕಲ್ ಫಾರ್ ಓಕಲ್‌ನ್ನು ಪ್ರಧಾನಿಯವರಿಗಿಂತಲೂ ಹಿಂದೆಯೇ ಪರಿಚಯಿಸಿದ್ದಾರೆ. ತನ್ನ ವೃತ್ತಿಯಲ್ಲಿ ಕಲೆ ಮತ್ತು ನೈಪುಣ್ಯತೆಯನ್ನು ಬೆಳೆಸುವ ಮೂಲಕ ರೋಲ್ ಮಾಡೆಲ್ ಆಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತಿರುವ ಕಾಲದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಭರಣ ತಯಾರಿಕಾ ಕಾರ್ಯದ ಮೂಲಕ ಪರಂಪರೆ ಉಳಿಸಿ ವೃತ್ತಿಯಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಕಲೆಯ ಜೊತೆಗೆ ತಂತ್ರಜ್ಞಾನದ ಸಮ್ಮಿಳಿತವಾಗಿದೆ-ಬಲರಾಮ ಆಚಾರ್ಯ:
ಪ್ರತಿಮೆಗಳ ಅನಾವರಣ ಮಾಡಿದ ಜಿ.ಎಲ್ ಆಚಾರ್ಯ ಜ್ಯುವೆಲರ್ಸ್‌ ಮ್ಹಾಲಕ ಬಲರಾಮ ಆಚಾರ್ಯ ಮಾತನಾಡಿ, ದಿ. ಹೌಸ್ ಆಫ್ ಆರಾಧನಾ ಎಂಬ ದೇವರ ಹೆಸರಿನೊಂದಿಗೆ ವಿಶಿಷ್ಠ ಮಳಿಗೆ ಪುತ್ತೂರಿನ ಜನತೆಗೆ ಪರಿಚಯಿಸಿದ್ದು ಆಧುನಿಕ ತಂತ್ರಜ್ಞಾನ ಬಳಸಿ ಪ್ರತಿಮೆ, ಆಕೃತಿಗಳ ರಚಿಸುವ ಮೂಲಕ ಕಲೆಯ ಜೊತೆಗೆ ವಿಜ್ಞಾನ ಸೇರಿಕೊಂಡಿದೆ. ವಿಶಿಷ್ಠ ಕಲಾಕೃತಿಗಳ ರಚನೆಯಲ್ಲಿಯೂ ತಂತ್ರಜ್ಞಾನವನ್ನು ಪರಿಚಯಿಸಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಲಾಂಛನವೂ ವಿಶಿಷ್ಠ ಆಕರ್ಷಿಣಿಯಾವಾಗಿದ್ದು ಕಲೆ, ತಂತ್ರಜ್ಞಾನಗಳ ಮೇಳೈತವಾಗಿದೆ. ಇನ್ನಷ್ಟು ಬೆಳೆಯಲಿ. ಚಿನ್ನದ ಬೆಳೆ ಗಣಕ್ಕೆ ಏರಿದ್ದು ಚಿನ್ನಕ್ಕೆ ಪರ್ಯಾಯವಾಗಿಯೂ ಈ ಕಲಾಕೃತಿಗಳನ್ನು ಬಳಸಿಕೊಳ್ಳುವ ಜೊತೆಗೆ ಭಕ್ತಿ, ಧಾರ್ಮಿಕ ಪ್ರಜ್ಞೆ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಕಲಾಕೃತಿಗಳ ಖ್ಯಾತ ದೇಶದಾದ್ಯಂತ ವ್ಯಾಪಿಸಲಿ-ಶ್ರೀಧರ ಆಚಾರ್ಯ
ಪೆಂಡೆಂಟ್ ಅನಾವರಣ ಮಾಡಿದ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಮಾತನಾಡಿ, ತನ್ನ ವಿಶಿಷ್ಟ ಕುಸುರಿ ಕೆಲಸಗಳಿಗೆ ಪ್ರಸಿದ್ಧಿಯಾಗಿರುವ ಗಂಗಾಧರ ಆಚಾರ್ಯ ಅವರು ಸಮಾಜದ ಆಸ್ತಿ. ತನ್ನ ಮಕ್ಕಳಿಗೂ ಸ್ವರ್ಣೋದ್ಯಮದ ಬಗ್ಗೆ ತರಬೇತಿ ನೀಡಿ ಅವರನ್ನೂ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕುಲ ಕಸಬುನ್ನು ಮುಂದುವರಿಸಿದರುವುದು ಶ್ಲಾಘನೀಯ. ಆಧುನಿಕ ತಂತ್ರಜ್ಞಾನದೊಂದಿಗೆ ವಿಶಿಷ್ಠ ಕಲಾಕೃತಿಗಳ ತಯಾರಿಸಿ, ಅವುಗಳ ಲೋಕಾರ್ಪಣೆಗೊಂಡಿದೆ. ಮುಂದೆ ಈ ಕಲಾಕೃತಿಗಳ ಖ್ಯಾತಿ ದೇಶದಾದ್ಯಂತ ಪಸರಿಸಲಿ ಎಂದು ಹಾರೈಸಿದರು.

ವಿಶಿಷ್ಠ ಕಲಾಕೃತಿಗಳ ರಚನೆ ಬಹುದೊಡ್ಡ ಸಾಧನೆ-ಮೋಹನ ರೈ ನರಿಮೊಗರು
ವೆಬ್ ಸೈಟ್ ಅನಾವರಣ ಮಾಡಿದ ಮೋಹನ ರೈ ನರಿಮೊಗರು ಮಾತನಾಡಿ, ತನ್ನ ಉದ್ಯಮದ ಜೊತೆಗೆ ಸಾವಿರಾರು ಮಂದಿಗೆ ವಿದ್ಯಾದಾನ ಮಾಡಿ, ತನ್ನ ಕೌಶಲ್ಯಗಳನ್ನು ಬೆಳೆಸಲು ಸಹಕರಿಸಿದ ಗಂಗಾಧರ ಆಚಾರ್ಯ ಅವರು ಸಾಮಾಜಿಕ ಕಲಕಳಿಯೊಂದಿಗೆ ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನಾರೋಗ್ಯ ವೆಚ್ಚ, ಮದುವೆ ಕಾರ್ಯಕ್ರಮಗಳಿಗೆ ಆರ್ಥಿಕ ಸಹಕಾರ ನೀಡಿದವರು. ಇದೀಗ ತನ್ನ ವಿಶಿಷ್ಠ ಕಲಾನೈಪುಣ್ಯತೆಯೊಂದಿಗೆ ವಿವಿಧ ಲೋಹಗಳ ವಿಗ್ರಹ ರಚನೆ ಮಾಡುತ್ತಿರುವುದು ಬಹು ದೊಡ್ಡ ಸಾಧನೆಯಾಗಿದೆ ಎಂದರು.

ಸ್ವರ್ಣೋದ್ಯಮದಲ್ಲಿ ಹೊಸತನ ನೀಡಿದವರು-ಬಾಲಚಂದ್ರ ಮರೀಲು
ನಗರ ಸಭೆಯ ನಿಕಟಪೂರ್ವ ಉಪಾಧ್ಯಕ್ಷ ಬಾಲಚಂದ್ರ ಮರೀಲು ಮಾತನಾಡಿ, ತನ್ನ ವಿಶಿಷ್ಠ ಕೌಶಲ್ಯ ಹಾಗೂ ನೈಪುಣ್ಯತೆಯೊಂದಿಗೆ ಉದ್ಯಮದಲ್ಲಿ ಸದಾ ಬದಲಾವಣೆ ಬಯಸುತ್ತಿರುವ ಗಂಗಾಧರ ಆಚಾರ್ಯ ಅವರು ಸ್ವರ್ಣೋದ್ಯಮದಲ್ಲಿ ಹೊಸತನ ನೀಡುತ್ತಿದ್ದಾರೆ. ಇದು ವಿನ್ಯಾಸಕ್ಕೆ ಸೀಮಿತವಾಗಿರದೆ ತಂತ್ರಜ್ಞಾನದಲ್ಲಿಯೂ ಮುಂದುವರಿದಿದ್ದಾರೆ. ವೆಬ್‌ಸೈಟ್ ಅನಾವರಣಗೊಳಿಸುವ ಮೂಲಕ ದೇಶ ವಿದೇಶಗಳಲ್ಲಿಯೂ ಖರೀದಿಸಲು ಅವಕಾಶ ನೀಡಿದ್ದಾರೆ. ತಂದೆಯ ಕೆಲಸಗಳಿಗೆ ಮಕ್ಕಳೂ ಸಾಥ್ ನೀಡುತ್ತಿದ್ದಾರೆ. ಇವರ ಮೂಲಕ ಇನ್ನಷ್ಟು ವಿಶೇಷ ವಿನ್ಯಾಸಗಳ ಮೂಡಿಬರಲಿ. ವೃತ್ತಿ, ಕೌಶಲ್ಯಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧ ಪಡೆಯಲಿ ಎಂದು ಶುಭಹಾರೈಸಿದರು.

ಮ್ಹಾಲಕ ಗಂಗಾಧರ ಆಚಾರ್ಯ ಸ್ವಾಗತಿಸಿದರು. ಪುತ್ರ ರಾಹುಲ್ ಆಚಾರ್ಯ ವಂದಿಸಿದರು. ಪತ್ನಿ ಗೀತಾ ಗಂಗಾಧರ ಆಚಾರ್ಯ ಪ್ರಾರ್ಥಿಸಿದರು. ಹೇಮಜಯರಾಮ ರೈ ಕಾರ್ಯಕ್ರಮ ನಿರೂಪಿಸಿದರು.

ಚಿನ್ನದ ನಂಟಿನೊಂದಿಗೆ 1984ರಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, 1987ರಲ್ಲಿ ಪುರುಷರಕಟ್ಟೆ ಮನೆಯಲ್ಲಿ ಕೆಲಸ ಪ್ರಾರಂಭಿಸಿದ್ದೆ. ನಂತರ 4988 ಸ್ವಂತ ಕಟ್ಟಡ ನಿರ್ಮಿಸಿ ಅದರಲ್ಲಿ ಮಳಿಗೆ ಪ್ರಾರಂಭಿಸಿದ್ದು ರಾಜ್ಯ ಹೊರ ರಾಜ್ಯಗಿಂದರಲೂ ಗ್ರಾಹಕರನನು ಸೆಳೆಯುವಲ್ಲಿ ಯಶ್ವಸಿಯಾಗಿದ್ದೆ. ಅದಾಗಲೇ 12 ಮಂಧಿ ಶಿಷ್ಯಂದಿರನ್ನು ನಿರ್ಮಿಸಿದ್ದೆ. ಅಂದಿನ ದಿನಗಳಲ್ಲೇ ಜಿ.ಎಲ್ ಆಚಾರ್ಯ ಜ್ಯುವೆಲರ್ಸ್‌ ಗೆ ತಿಂಗಳಿಗೆ 3-4ಕೆಜಿ ಆಭರಣ ತಯಾರಿಸಿ ಕೊಡಲಾಗುತ್ತಿತ್ತು. ಯಾರಿಂದಲೂ ತಯಾರಿಸಲಾಗದ ವಿನ್ಯಾಸವನ್ನು ಮಾಡುವ ಖ್ಯಾತಿಯನ್ನು ಅಂದೇ ಪಡೆದುಕೊಂಡಿದ್ದೆ. 1988ರಲ್ಲಿ ಬಲರಾಮ ಆಚಾರ್ಯ ಅವರ ಕಟ್ಟಡಲ್ಲಿ ಹರ್ಷಿತ್ ಜ್ಯುವೆಲರ್ಸ್‌ ಮಳಿಗೆ ಪ್ರಾರಂಭಿಸಿ ಪುತ್ತೂರಿಗೆ ಪಾದಾರ್ಪಣೆ ಮಾಡಿದ್ದೆ. ನಂತರ ಬಲರಾಮ ಆಚಾರ್ಯ ಆಶೀರ್ವಾದದಲ್ಲಿ ಈಗಿನ ರಾಧಾಕೃಷ್ಣ ಕಟ್ಟಡದಲ್ಲಿ ಮಳಿಗೆ ಪ್ರಾರಂಭಿಸಿ ಸಂಸ್ಥೆಯು ಮುನ್ನಡೆಯುತ್ತಿದೆ. ನನ್ನ ಬೆಳವಣಿಗೆಯಲ್ಲಿ ಬಲರಾಮ ಆಚಾರ್ಯ ಅವರು ಆರ್ಥೀಕ ನೆರವು ನೀಡಿ ನನ್ನನ್ನು ಬೆಳೆಸಿದ್ದು ಅವರು ನಮ್ಮ ಸಂಸ್ಥೆಯ ಬೆನ್ನೆಲುಬಾಗಿ ನಮ್ಮನ್ನು ಬೆಳೆಸಿದವರು. 2007ರಲ್ಲಿ ಹರ್ಷನಾರಾಯನ ಮಹಿಳಾ ತರಬೇತಿ ಕೇಂದ್ರ ಪ್ರಾರಂಭಿಸಿ 400ಕ್ಕೂ ಅಧಿಕ ಮಂದಿಗೆ ವೃತ್ತಿ ಕೌಶಲ್ಯವನ್ನು ಧಾರೆ ಎರೆದಿದ್ದೇನೆ. ಸ್ವರ್ಣೋದ್ಯಮದಲ್ಲಿ 42 ವರ್ಷಗಳ ಅನುಭವದೊಂದಿಗೆ ಇದೀಗ ದಿ. ಹೌಸ್ ಆಫ್ ಆರಾಧನಾ ಎಂಬ ಹೆಸರಿನೊಂದಿಗೆ ಚಿನ್ನ ಬೆಳ್ಳಿ, ಪಂಚಲೋಹ ಮೊದಲಾದ ಲೋಹಗಳಲ್ಲಿ ದೈವ, ದೇವರ ವಿಗ್ರಹ, ಮಾನವನ ಆಕೃತಿಗಳನ್ನು ಹೊಸ ತಂತ್ರಜ್ಞಾನ ಅಳವಡಿಸ 3ಡಿ ಡಿಸೈನ್‌ನೊಂದಿಗೆ ಮಾಡಲಾಗುತ್ತಿದೆ.
-ಗಂಗಾಧರ ಆಚಾರ್ಯ, ಮ್ಹಾಲಕರು, ಹರ್ಷಿತ್ ಜ್ಯುವೆಲರ್ಸ್

LEAVE A REPLY

Please enter your comment!
Please enter your name here