







ಪುತ್ತೂರು:ಮೊಬೈಲ್ಗೆ ಬಂದ ಮೆಸೇಜ್ ವೊಂದಕ್ಕೆ ಒಕೆ ಕ್ಲಿಕ್ ಮಾಡಿದ ಕಾರಣ ಅಕೌಂಟ್ನಿಂದ ಹಣ ಡೆಬಿಟ್ ಆಗಿ ವಂಚನೆಗೊಳಗಾಗಿರುವ ಬಗ್ಗೆ ಪಾಣಾಜೆ ನಿವಾಸಿಯೋರ್ವರು ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಮ್ಮದ್ ಕುಂಞ ಅವರು ವಂಚನೆಗೊಳಗಾಗಿ ದೂರು ನೀಡಿದವರು.


‘ದಿನಾಂಕ 29/09/2026ರಂದು ತನ್ನ ಮೊಬೈಲ್ ಗ್ರೀನ್ ಮೇಲೆ system update ಗಾಗಿ ok ಮಾಡಿ ಎಂಬ ಮೆಸೇಜ್ ಬಂದಿತ್ತು. ಇದನ್ನು cancel ಮಾಡಲು ನೋಡಿದರೆ cancel option ಇಲ್ಲದ ಕಾರಣ ಅನಿವಾರ್ಯವಾಗಿ ok option ಕ್ಲಿಕ್ ಮಾಡಿದ್ದೆ.ನಂತರ malware application download ಆಗಿ ಮೊಬೈಲ್ ಸಂಪೂರ್ಣವಾಗಿ ಹ್ಯಾಕ್ ಆಗಿದ್ದು ದಿನಾಂಕ 01/10/2026ರಂದು ತನ್ನ ಮೊಬೈಲ್ಗೆ, ಬೆಟ್ಟಂಪಾಡಿ ಬ್ಯಾಂಕ್ ಆಫ್ ಬರೋಡಾದ ತನ್ನ ಖಾತೆಯಿಂದ ರೂ.50 ಸಾವಿರ ಹಣ ಡೆಬಿಟ್ ಆಗಿರುವ ಬಗ್ಗೆ ಮೆಸೇಜ್ ಬಂದಿರುತ್ತದೆ. ಬಳಿಕ ಗೂಗಲ್ ಪೇ ಅಕೌಂಟ್ ಮೂಲಕ ಚೆಕ್ ಮಾಡಿದಾಗ 29/09/2026 ರಿಂದ 01/10/2026 ರವರೆಗೆ 2,40,000 ಲಕ್ಷ ರೂ ಖಾತೆಯಿಂದ ಅಪರಿಚಿತ ವ್ಯಕ್ತಿಗೆ ವರ್ಗಾವಣೆಯಾಗಿದ್ದು ಹಣ ಪಡೆದು ವಂಚಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.













