







ಪುತ್ತೂರು: ನರ್ಸರಿಯಲ್ಲಿ ಗಾರ್ಡನಿಂಗ್ ಕೆಲಸಮಾಡುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಶಾಂತಿಗೋಡು ಗ್ರಾಮದಿಂದ ವರದಿಯಾಗಿದೆ.


ಶಾಂತಿಗೋಡು ಪಜಿರೋಡಿ ನಿವಾಸಿ ಪುರುಷೋತ್ತಮ (42ವ.)ಎಂಬವರು ನಾಪತ್ತೆಯಾದವರು. ನರ್ಸರಿಯೊಂದರಲ್ಲಿ ಗಾರ್ಡನಿಂಗ್ ಕೆಲಸ ನಿರ್ವಹಿಸುತ್ತಿದ್ದ ಅವರು ಅ.12ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ. ಈ ಕುರಿತು ಅವರ ಪತ್ನಿ ರುಕ್ಮಿಣಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













