







ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಶಾಲಾಡಳಿತ ಮಂಡಳಿಯ ಪಾತ್ರ ಮಹತ್ತರ: ಕೃಷ್ಣ ಶೆಟ್ಟಿ


ಉಪ್ಪಿನಂಗಡಿ: ವಿದ್ಯಾ ಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ಸರ್ವೋತೋಮುಖ ಉನ್ನತಿಗಾಗಿ ಕಾರ್ಯಯೋಜನೆಯನ್ನು ರೂಪಿಸಿ ಪ್ರತಿಯೋರ್ವ ವಿದ್ಯಾರ್ಥಿಯೊಳಗಿನ ಅಂತರ್ಗತ ಪ್ರತಿಭೆಗಳನ್ನು ಪ್ರಕಾಶಿಸುವಂತೆ ಮಾಡುವಲ್ಲಿ ಶಾಲಾ ಆಡಳಿತ ಮಂಡಳಿಗಳ ಪಾತ್ರ ಮಹತ್ತರವಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ ತಿಳಿಸಿದರು.
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲೆಯ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡುತ್ತಿದ್ದರು.
ಶಾಲಾಡಳಿತದ ಅಧ್ಯಕ್ಷ ಸುನಿಲ್ ಆನಾವು ಮಾತನಾಡಿ, ಮಾತೃ ಭಾಷಾ ಶಿಕ್ಷಣದೊಂದಿಗೆ ಸಂಸ್ಕಾರ ಶಿಕ್ಷಣದ ಕೇಂದ್ರವಾಗಿರುವ ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರಕಾಶನಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾಡಳಿತದ ಗೌರವಾಧ್ಯಕ್ಷರಾದ ಗೋವಿಂದ ಭಟ್ ಎ., ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬಿ, ಉಪಾಧ್ಯಕ್ಷರಾದ ಜಯಂತ ಪೊರೋಳಿ, ಕೋಶಾಧಿಕಾರಿ ಗುಣಕರ ಅಗ್ನಾಡಿ, ಸಮಿತಿ ಸದಸ್ಯರಾದ ಗಣೇಶ್ ಕುಲಾಲ್, ಯು. ಸ್ವರ್ಣೇಶ್ ಗಾಣಿಗ, ಗೀತಾಲಕ್ಷ್ಮೀ ತಾಳ್ತಜೆ , ಸಾಮ್ರಾಟ್ , ಜಯಶ್ರೀ ದಿವಾಕರ್, ಹಾಗೂ ಸಲಹಾ ಸಮಿತಿಯ ಸದಸ್ಯರಾದ ಅತುಲ್ ಕುಮಾರ್ ಕೆ.ಎನ್., ಹರೀಶ್ ಶೆಟ್ಟಿ, ಡಾ. ಸುಪ್ರಿತಾ ರೈ, ಕರುಣಾಕರ ಸುವರ್ಣ , ಅಧಿಕಾರ ಸ್ವೀಕಾರ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯ ನಾರಾಯಣ ಕೆ.ಎಂ., ಡಾ. ಕೆ ಕೃಷ್ಣ ಭಟ್, ರವೀಂದ್ರ ರೈ ದಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಸನ್ನ, ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ, ಶ್ರೀ ಮಾಧವ ಶಿಶು ಮಂದಿರದ ಅಧ್ಯಕ್ಷ ಹರಿರಾಮಚಂದ್ರ, ಶಾಲಾ ಪೋಷಕ ಸಂಘದ ಉದಯ ಅತ್ರಮಜಲು, ಮೊದಲಾದವರು ಭಾಗವಹಿಸಿದ್ದರು.













