ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿ ನವರಾತ್ರಿ ಉತ್ಸವ

0

4 ನೇ ದಿನದ ಸಂಭ್ರಮ, ಭಜನೆ, ಅನ್ನಸಂತರ್ಪಣೆ

ಪುತ್ತೂರು: ಅತ್ಯಂತ ಕಾರಣಿಕತೆಯ ಮಂದಿರವಾಗಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ ನೆಲೆಸಿರುವ ಭಗವಾನ್ ಶ್ರೀರಾಮಚಂದ್ರ ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ 4 ನೇ ದಿನದ ಸಂಭ್ರಮದಲ್ಲಿ ಅ.14 ರಂದು ರಾತ್ರಿ ಬೆದ್ರುಮಾರು ಅರುಣಾಶಂಕರ ರೈ ಮುಂಬೈ ಇವರ ಭಜನಾ ಸೇವೆ ಹಾಗೇ ಕುಂಬ್ರ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಂಬ್ರ ಶ್ರೀ ಸಾಯಿ ಸರ್ವೀಸ್ ಪಾಯಿಂಟ್‌ನ ನಾರಾಯಣ ಪೂಜಾರಿ ಕುರಿಕ್ಕಾರ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುಂಬ್ರ ಶ್ರೀ ಶಾರದಾ ಕಲಾ ಶಾಲೆಯ ವಿದುಷಿ ದೀಪ್ತಿ ರವಿಚಂದ್ರ ಇವರ ಶಿಷ್ಯವೃಂದದವರಿಂದ ನೃತ್ಯ ಸಮೂಹ’ ಪ್ರದರ್ಶನಗೊಂಡಿತು.

ಊರ ಪರವೂರ ನೂರಾರು ಭಕ್ತರು ಕಾರ್ಯಕ್ರಮ ವೀಕ್ಷಿಸಿದರು. ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ಶ್ರೀರಾಮ ಮಂದಿರದ ಆಡಳಿತ ಸಮಿತಿ ಹಾಗೂ ಭಜನಾ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಹಾಗೇ 129 ಮನೆಯ ಭಜನಾ ಸೇವಾರ್ಥಿಗಳು ಉಪಸ್ಥಿತರಿದ್ದರು.



ಇಂದು ಶ್ರೀರಾಮ ಮಂದಿರದಲ್ಲಿ ಅ.15 ರಂದು ರಾತ್ರಿ ಪದ್ಮಾವತಿ ವಿಶ್ವನಾಥ ರೈ ಕೋರಂಗ ಇವರ ಭಜನಾ ಸೇವೆ ಹಾಗೇ ಕಾವು ಶ್ರೀ ತುಡರ್ ಭಜನಾ ಸಂಘ ಇವರಿಂದ ಭಜನಾ ಕಾರ್ಯಕ್ರಮ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿದುಷಿ ಸಂದ್ಯಾ ಗಣೇಶ್ ವಿಟ್ಲ ಇವರ ಮುಂಡೂರು ಶಾಲೆಯ ಶಿಷ್ಯ ವೃಂದದವರಿಂದ ನೃತ್ಯ ವೈವಿಧ್ಯ’ ನಡೆಯಲಿದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here