ಪಡ್ನೂರು: ಅಶ್ವತ್ಥಕಟ್ಟೆಯಲ್ಲಿ ಅಶ್ವತ್ಥ ನಾರಾಯಣ ಪೂಜೆ : ವಾಹನಗಳಿಗೆ ಆಯುಧಪೂಜೆ

0

ಪುತ್ತೂರು: ವಿವಾಹ ಭಾಗ್ಯ, ಸಂತಾನ ಪ್ರಾಪ್ತಿ ಸೇರಿದಂತೆ ಹಲವು ಸಂಕಷ್ಟಗಳಿಗೆ ಪರಿಹಾರ ದೊರೆಯುವ ಪವಿತ್ರ ಕ್ಷೇತ್ರವೆಂಬ ನಂಬಿಕೆಗೆ ಪಾತ್ರವಾಗಿರುವ ಪಡ್ನೂರು ಗ್ರಾಮದ ಯರ್ಮುಂಜಪಳ್ಳದ ಶ್ರೀ ಅಶ್ವತ್ಥ ಕಟ್ಟೆಯಲ್ಲಿ ಅ.15ರಂದು ಅಶ್ವತ್ಥ ನಾರಾಯಣ ಪೂಜೆ ಹಾಗೂ ಆಯುಧಪೂಜೆ ನೆರವೇರಿತು.


ಶ್ರೀ ಅಶ್ವತ್ಥ ಕಟ್ಟೆ ದೇವತಾ ಸಮಿತಿ ಯರ್ಮುಂಜಪಳ್ಳ ಪಡ್ನೂರು ಹಾಗೂ ಶ್ರೀ ಧೂಮಾವತಿ ಯುವಕ ಮಂಡಲ ಜುಮಾದಿಪಲ್ಕೆ ಪಡ್ನೂರು ಇದರ ಆಶ್ರಯದಲ್ಲಿ ನಡೆದ 8ನೇ ವರ್ಷದ ಈ ಧಾರ್ಮಿಕ ಕಾರ್ಯಕ್ರಮವು ವೇ. ಮೂ. ಹರಿಪ್ರಸಾದ್ ಭಟ್ ಬನಾರಿ ಅವರ ನೇತೃತ್ವದಲ್ಲಿ ಬೆಳಗ್ಗೆ ನಡೆಯಿತು.


ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥ ನಾರಾಯಣ ಪೂಜೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಭಕ್ತರು ಶ್ರದ್ಧೆ, ಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಬಳಿಕ ಆಯುಧಪೂಜೆ ನಡೆಯಿತು. ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ವಾಹನಗಳನ್ನು ದೇವರ ಸನ್ನಿಧಿಗೆ ತಂದು ಪೂಜಿಸುವ ಸಂಪ್ರದಾಯಕ್ಕೆ ಸಾಕ್ಷಿಯಾಗಿ, ಊರಿನವರು ತಮ್ಮ ವಾಹನಗಳನ್ನು ಸರದಿಯಲ್ಲಿ ನಿಲ್ಲಿಸಿ ಪುರೋಹಿತರ ಮೂಲಕ ಪೂಜೆ ಸಲ್ಲಿಸಿದರು. ವಾಹನಗಳ ಸುಗಮ ಸಂಚಾರ, ಸುರಕ್ಷಿತ ಪ್ರಯಾಣ ಹಾಗೂ ಬದುಕಿನಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಭಕ್ತರು ಪೂಜೆಯಲ್ಲಿ ಭಾಗಿಯಾದರು. ಧಾರ್ಮಿಕ ಶ್ರದ್ಧೆ ಮತ್ತು ಊರಿನವರ ಸಾಮೂಹಿಕ ಸಹಭಾಗಿತ್ವದೊಂದಿಗೆ ನಡೆದ ಕಾರ್ಯಕ್ರಮವು ಕ್ಷೇತ್ರದ ಆಧ್ಯಾತ್ಮಿಕ ಮಹತ್ವವನ್ನು ಮತ್ತೊಮ್ಮೆ ಸಾರಿತು. ಈ ಸಂದರ್ಭದಲ್ಲಿ ಶ್ರೀ ಅಶ್ವತ್ಥ ಕಟ್ಟೆ ದೇವತಾ ಸಮಿತಿಯ ಗೌರವಾಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷ ಗಿರಿಯಪ್ಪ ಪೂಜಾರಿ ಅಂಡೆಪುಳಿ, ಶ್ರೀ ಧೂಮಾವತಿ ಯುವಕ ಮಂಡಲದ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಮಾವಿನಕಟ್ಟೆ, ಅಧ್ಯಕ್ಷ ರೋಹನ್ ರಾಜ್, ಗಂಗಾಧರ ಗೌಡ, ಸಾಂತಪ್ಪ ಪೂಜಾರಿ, ಶಿವಪ್ಪ ನಾಯ್ಕ, ಜಯಂತ ಗೌಡ, ಸಾಂತಪ್ಪ ನಾಯ್ಕ್, ಸಂತೋಷ್, ನಾರಾಯಣ, ಧನು, ಲೋಕೇಶ್ ಗೌಡ ಪಡ್ಡಾಯೂರು, ಬಾಬು ಮೂಲ್ಯ, ಬಾಲಕೃಷ್ಣ ಪೂಜಾರಿ, ದೇವದಾಸ್ ಬಂಗೇರ, ಜಯರಾಜ್ ಪೂಜಾರಿ, ಗೋಪಾಲಕೃಷ್ಣ ನಡುಬೈಲುಗುತ್ತು, ಮಾಯಿಲಪ್ಪ ನಾಯ್ಕ, ವಸಂತ ಗೌಡ, ರಮೇಶ್ ಎರ್ಮುಂಜ, ಬಾಳಪ್ಪ ಗೌಡ, ಕೃತಿಕ್, ಹರ್ಷಿತ್, ಗೀತಾ, ಕಾವ್ಯ, ದೇವಕಿ, ಗೀತಾ ಕಡವ, ದೀಕ್ಷಿತ್, ಲಿತೇಶ್, ಧನುಷ್, ಅನೀಶ್, ಬಾಳಪ್ಪ ನಾಯ್ಕ ತೇಮೆರು, ಪವಿತ್ರ ಅಂಡೆಪುಣಿ, ದೇವಿಕ, ಸುಂದರ ಗೌಡ ಅಂಡೆಪುಣಿ ಮತ್ತಿತರರು ಉಪಸ್ಥಿತರಿದ್ದರು.

ಭಕ್ತಿಯಿಂದ ಬೇಡಿದ್ದನ್ನು ನೀಡುವ ಅಶ್ವತ್ಥ
ಪಡ್ನೂರು ಯರ್ಮುಂಜಪಳ್ಳದ ಅಶ್ವತ್ಥ ಕಟ್ಟೆಯಲ್ಲಿ ಭಕ್ತಿಯೇ ಪ್ರಧಾನ. ಇಲ್ಲಿ ಪ್ರತಿ ಶನಿವಾರ ಅಶ್ವತ್ಥ ಪೂಜೆ ನಡೆಯುತ್ತದೆ. ವಿವಾಹ ಭಾಗ್ಯ, ಸಂತಾನ ಪ್ರಾಪ್ತಿ ಸೇರಿದಂತೆ ಭಕ್ತರ ಹಲವು ಪ್ರಾರ್ಥನೆಗಳಿಗೆ ಈ ಕ್ಷೇತ್ರದ ಮಹಿಮೆ ಅಪಾರ ಎಂಬ ನಂಬಿಕೆಯಿದೆ. ಭಕ್ತರು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿ ದೇವರ ಅನುಗ್ರಹ ಪಡೆಯುತ್ತಾರೆ. ಇದೇ ಪವಿತ್ರ ಸ್ಥಳದಲ್ಲಿ ಪ್ರತಿವರ್ಷ ಆಯುಧಪೂಜೆಯನ್ನು ಶ್ರದ್ಧೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಈಶ್ವರ ಭಟ್ ಪಂಜಿಗುಡ್ಡೆ ಗೌರವಾಧ್ಯಕ್ಷರು, ಶ್ರೀ ಅಶ್ವತ್ಥ ಕಟ್ಟೆ ದೇವತಾ ಸಮಿತಿ, ಯರ್ಮುಂಜಪಳ್ಳ

LEAVE A REPLY

Please enter your comment!
Please enter your name here