







ಬೆಟ್ಟಂಪಾಡಿ: ಬೆಟ್ಟಂಪಾಡಿ ವಿನಾಯಕ ನಗರ ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿಯಿಂದ ಶಂಖನಾದ ತರಬೇತಿ ನಡೆಯಲಿದ್ದು ಇದರ ಉದ್ಘಾಟನೆ ಅ.15ರಂದು ಬೆಟ್ಟಂಪಾಡಿ ವಿನಾಯಕ ನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಸಂಜೆ 6.00 ಗಂಟೆಗೆ ನಡೆಯಲಿದೆ.


ಶಂಖನಾದ ತರಬೇತಿಯ ಉದ್ಘಾಟನೆಯನ್ನು ಶ್ರೀನಿಧಿ ಕನ್ ಸ್ಟ್ರಕ್ಷನ್ ಮಾಲಕರಾದ ವಾಸಪ್ಪ ಪೂಜಾರಿ ಮಿತ್ತಡ್ಕರವರು ನೆರವೇರಿಸಲಿದ್ದಾರೆ. ನಿವೃತ ಚಿತ್ರಕಲಾ ಗುರುಗಳಾದ ಐ ಗೋಪಾಲಕೃಷ್ಣ ರಾವ್ ರವರು ಶಂಖನಾದ ತರಬೇತಿಯನ್ನು ನೀಡಲಿದ್ದಾರೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹರ್ಷಿತ್ ಉಪ್ಪಳಿಗೆ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.



ಇದೇ ದಿನ ರಾತ್ರಿ ಮಂದಿರದಲ್ಲಿ ನವರಾತ್ರಿಯ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದೆ.
ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು 9449386648 \9008927772 ಈ ಮೊಬೈಲ್ ಸಂಖೈಯನ್ನು ಸಂಪರ್ಕಿಸಬಹುದು ಎಂದು ಶ್ರೀ ಸಿದ್ದಿವಿನಾಯಕ ಸೇವಾ ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.










