







ಬಡಗನ್ನೂರು: ಪಡುಮಲೆ ಶ್ರೀ ಪೂಮಾಣಿ- ಕಿನ್ನಿಮಾಣಿ ದೈವಸ್ಥಾನ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ತುಲಾ ಕಾವೇರಿ ಸಂಕ್ರಮಣದ ಶುಭ ದಿನದಂದು ವ್ಯಾಘ್ರ ಚಾಮುಂಡಿ ದೈವಕ್ಕೆ ನವಾನ್ನ ಹಾಗೂ ದೈವದ ನೇಮವು ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಾಂತ್ರಿಗಳ ಮಾರ್ಗದರ್ಶನದಲ್ಲಿ ಅ. 17 ರಂದು ನಡೆಯಲಿರುವುದು.


ಭಕ್ತಾದಿಗಳಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು, ತನು-ಮನಗಳೊಂದಿಗೆ ಸಹಕರಿಸಿ, ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗವಂತೆ ವ್ಯವಸ್ಥಾಪನಾ ಸಮಿತಿ,ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ



ಕಾರ್ಯಕ್ರಮಗಳು
ಪೂರ್ವಾಹ್ನ ಗ 7ಕ್ಕೆ ಗಣಪತಿ ಹೋಮ 9 ರಿಂದ ಉಳ್ಳಾಕುಲು, ವ್ಯಾಘ್ರಚಾಮುಂಡಿ ಮತ್ತು ಗುಳಿಗ ದೈವಗಳಿಗೆ ತಂಬಿಲ ಸೇವೆ, 11ರಿಂದ ಪುದ್ವಾರ್ ಮೆಚ್ಚಿ ನೇಮ, ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನ ಪ್ರಸಾದ ಭೋಜನ ನಡೆಯಲಿದೆ.









