







ಪುತ್ತೂರು : ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ ವತಿಯಿಂದ ಹಿಂದೀ ದಿನ ಆಚರಣೆ ಪ್ರಯುಕ್ತ ಯುವ ಪೀಳಿಗೆ ಮತ್ತು ಕೃಷಿ ಎಂಬ ವಿಷಯದ ಬಗ್ಗೆ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ನಡೆಸಿದ ತಾಲೂಕು ಮಟ್ಟದ ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 10 ನೇ ತರಗತಿಯ ಆದಿತ್ಯ ಭಂಡಾರ್ಕರ್ ನೆಲ್ಲಿಕಟ್ಟೆ (ಕೆ ಅವಿನಾಶ್ ಭಂಡಾರ್ಕರ್ ಮತ್ತು ಅಕ್ಷತಾ ಭಂಡಾರ್ಕರ್ ದಂಪತಿಗಳ ಪುತ್ರ ) ಪ್ರಥಮ ಸ್ಥಾನ ಪಡೆದುಕೊಂಡು ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿರುತ್ತಾನೆ.
ಸತತ ಮೂರನೇ ಬಾರಿಗೆ ಇವನು ಈ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದುಕೊಂಡಿರುತ್ತಾನೆ ಹಾಗೂ ಇದೇ ಸ್ಪರ್ಧೆಯಲ್ಲಿ ಕೆ. ಪ್ರಥಮ್ ಭಕ್ತ (ಚಿಕ್ಕಮುಡ್ನೂರು ಕೆ ಪ್ರಕಾಶ್ ಭಕ್ತ ಮತ್ತು ಪಲ್ಲವಿ ಪಿ ಭಕ್ತರವರ ಪುತ್ರ) ತೃತೀಯ ಸ್ಥಾನವನ್ನು ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿತುತ್ತಾನೆ. ಇವರಿಗೆ ಹಿಂದಿ ಶಿಕ್ಷಕಿ ಗೀತಾ ರೈ ಕೆ ಯವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹಾಗೂ ಪ್ರಭಾರ ಮುಖ್ಯ ಶಿಕ್ಷಕಿ ಗಾಯತ್ರಿಎಸ್‌ರವರು ತಿಳಿಸಿರುತ್ತಾರೆ.















