ಅ.16 : ‘ಎಂಜಿಎಂ ಡ್ರೈಫ್ರುಟ್ಸ್ ಹಬ್’ ಶುಭಾರಂಭ

0

ಪ್ರೀಮಿಯಂ ಗುಣಮಟ್ಟದ ಒಣಹಣ್ಣುಗಳ ಮಳಿಗೆ
ಖರೀದಿಗೆ ಶೇ.10-40ರ ವರೆಗೆ ರಿಯಾಯಿತಿ

ಪುತ್ತೂರು: ಆರೋಗ್ಯಕರ ಜೀವನಶೈಲಿಗೆ ಪೂರಕವಾದ ಗುಣಮಟ್ಟದ ಒಣಹಣ್ಣುಗಳು ಹಾಗೂ ವಿವಿಧ ಆಹಾರ ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ ‘ಎಂಜಿಎಂ ಡ್ರೈಫ್ರುಟ್ಸ್ ಹಬ್’ ಅ.16ರಂದು ನಗರದ ಮುಖ್ಯರಸ್ತೆಯ ಶ್ರೀಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.


ಮಳಿಗೆಯಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ವಾಲ್ನಟ್, ಒಣದ್ರಾಕ್ಷಿ, ಖರ್ಜೂರ, ಮಿಕ್ಸ್‌ಡ್ ನಟ್ಸ್, ಫ್ಲೇವರ್ಡ್ ನಟ್ಸ್, ವಿವಿಧ ಸೀಡ್ಸ್, ಮಸಾಲೆ ಪದಾರ್ಥಗಳು, ನಮ್ಕೀನ್, ಹರ್ಬಲ್ ಉತ್ಪನ್ನಗಳು ಹಾಗೂ ಗೃಹೋಪಯೋಗಿ ಉತ್ಪನ್ನಗಳು ಲಭ್ಯವಿರಲಿವೆ.ಗ್ರಾಹಕರ ಆರೋಗ್ಯ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ ಮಳಿಗೆಯಲ್ಲಿ ಪ್ರೀಮಿಯಂ ಗುಣಮಟ್ಟದ, ನೈಸರ್ಗಿಕ ಉತ್ಪನ್ನಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಕೃತಕ ಬಣ್ಣಗಳು ಹಾಗೂ ಸಂರಕ್ಷಕಗಳನ್ನು ಬಳಸದೆ ತಯಾರಿಸಿದ ಒಣಹಣ್ಣುಗಳೂ ಗ್ರಾಹಕರಿಗೆ ಲಭ್ಯವಾಗಲಿವೆ.


ಶುಭಾರಂಭದ ಪ್ರಯುಕ್ತ ವಿಶೇಷ ಕೊಡುಗೆ!
ಮಳಿಗೆಯ ಉದ್ಘಾಟನಾ ಸಂಭ್ರಮದ ಅಂಗವಾಗಿ ಗ್ರಾಹಕರಿಗೆ ಖರೀದಿಯ ಮೇಲೆ ಶೇ. 10ರಿಂದ 40ರ ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಗುಣಮಟ್ಟದ ಒಣಹಣ್ಣುಗಳು ಹಾಗೂ ಆರೋಗ್ಯಕರ ಆಹಾರ ಉತ್ಪನ್ನಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಈ ಹೊಸ ಮಳಿಗೆ ಉತ್ತಮ ಆಯ್ಕೆಯಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here