







ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ


ಪುತ್ತೂರು: ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರ ಸಹಿತ ದರ್ಶನ ನೀಡುತ್ತಿರುವ ಅತ್ಯಂತ ಕಾರಣಿಕತೆಯ ಮಂದಿರವಾಗಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಂಗವಾಗಿ ಅ.14 ರಂದು ರಾತ್ರಿ ಬೆದ್ರುಮಾರು ಅರುಣಾಶಂಕರ ರೈ ಮುಂಬೈ ಇವರ ಭಜನಾ ಸೇವೆ ಹಾಗೇ ಕುಂಬ್ರ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.




ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಂಬ್ರ ಶ್ರೀ ಸಾಯಿ ಸರ್ವೀಸ್ ಪಾಯಿಂಟ್ನ ನಾರಾಯಣ ಪೂಜಾರಿ ಕುರಿಕ್ಕಾರ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುಂಬ್ರ ಶ್ರೀ ಶಾರದಾ ಕಲಾ ಶಾಲೆಯ ವಿದುಷಿ ದೀಪ್ತಿ ರವಿಚಂದ್ರ ಇವರ ಶಿಷ್ಯವೃಂದದವರಿಂದ ನೃತ್ಯ ಸಮೂಹ’ ಪ್ರದರ್ಶನಗೊಂಡಿತು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಶ್ರೀ ಶಾರದಾ ಕಲಾ ಶಾಲೆಯ ವಿದ್ಯಾರ್ಥಿಗಳಾಗಿರುವ ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ಸಾಧನೆ ತ್ಯಾಗರಾಜನಗರ ಶಿವಪ್ರಸಾದ್ ಮತ್ತು ಅನುಪಮರವರ ಪುತ್ರಿ ದೀಕ್ಷಾ ಎಸ್ ಹಾಗೂ ಜಪಾನ್ನಲ್ಲಿ ಸಾಷ್ಟವೇರ್ ಡಿಸೈನಿಂಗ್ ಇಂಜಿನಿಯರ್ ಉದ್ಯೋಗಕ್ಕೆ ಆಯ್ಕೆಯಾದ ಸೌಮ್ಯಮಣಿ ಮತ್ತು ಮುಂಡಾಳಗುತ್ತು ಸುರೇಶ್ ರೈ ಮಾಣಿಪ್ಪಾಡಿಯವರ ಪುತ್ರಿ ಸೃಷ್ಠಿ ರೈಯವರನ್ನು ಶಾರದಾ ಕಲಾ ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ ಹಾಗೂ ಪದಾಧಿಕಾರಿಗಳು ಸಾಧಕ ವಿದ್ಯಾರ್ಥಿಗಳನ್ನು ಶ್ರೀ ದೇವರ ಪ್ರಸಾದ ಹಾಗೂ ಫಲಪುಷ್ಪಗಳೊಂದಿಗೆ ಸನ್ಮಾನಿಸಿ, ಗೌರವಿಸಿದರು.
ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ಶ್ರೀರಾಮ ಮಂದಿರದ ಆಡಳಿತ ಸಮಿತಿ ಹಾಗೂ ಭಜನಾ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಹಾಗೇ 129 ಮನೆಯ ಭಜನಾ ಸೇವಾರ್ಥಿಗಳು ಉಪಸ್ಥಿತರಿದ್ದರು.ಅ.15 ರಂದು ರಾತ್ರಿ ಪದ್ಮಾವತಿ ವಿಶ್ವನಾಥ ರೈ ಕೋರಂಗ ಇವರ ಭಜನಾ ಸೇವೆ ಹಾಗೇ ಕಾವು ಶ್ರೀ ತುಡರ್ ಭಜನಾ ಸಂಘ ಇವರಿಂದ ಭಜನಾ ಕಾರ್ಯಕ್ರಮ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್ ಗೌಡ ಪಂಜಿಗುಡ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿದುಷಿ ಸಂದ್ಯಾ ಗಣೇಶ್ ವಿಟ್ಲ ಇವರ ಮುಂಡೂರು ಶಾಲೆಯ ಶಿಷ್ಯ ವೃಂದದವರಿಂದ ನೃತ್ಯ ವೈವಿಧ್ಯ’ ಮನರಂಜಿಸಿತು.
ಇಂದು ಶ್ರೀರಾಮ ಮಂದಿರದಲ್ಲಿ
ಅ.16ರಂದು ರಾತ್ರಿ ಓಲೆಮುಂಡೋವು ಭಾಸ್ಕರ ರೈ ಕಳ್ಳಿಮಾರು ಇವರ ಭಜನಾ ಸೇವೆ, ಮುಂಡೂರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ ಇವರಿಂದ ಭಜನಾ ಕಾರ್ಯಕ್ರಮ, ಜೈದೀಪ್ ರೈ ಕೋರಂಗ ಇವರ ಸಾರಥ್ಯದಲ್ಲಿ ಸಾಂಸ್ಕೃತಿಕ ವೈಭವ ಕುಸಲ್ದ ಎಸಲ್ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.










