ಕೋಡಿಂಬಾಡಿಯಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಕೋಡಿಂಬಾಡಿ ಶ್ರೀ ಮಹಷಿಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ತಾಳಮದ್ದಳೆ “ಶರಸೇತು ಬಂಧ” ಎಂಬ ಆಖ್ಯಾನದೊಂದಿಗೆ ಅ.14ರಂದು ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ , ಚೆಂಡೆ ಮದ್ದಳೆಗಳಲ್ಲಿ ಮೋಹನ ಶರವೂರು ಮತ್ತು ಅನೀಶ್ ಕೃಷ್ಣ ಪುಣಚ ಸಹಕರಿಸಿದರು.ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಶ್ರೀ ರಾಮ ಮತ್ತು ವೃದ್ಧ ವಿಪ್ರ), ಕಿಶೋರಿ ದುಗ್ಗಪ್ಪ ನಡುಗಲ್ಲು (ಹನೂಮಂತ), ಹರಿಣಾಕ್ಷಿ ಜೆ ಶೆಟ್ಟಿ (ಅರ್ಜುನ) ಸಹಕರಿಸಿದರು. ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ನಿರ್ದೇಶನದಲ್ಲಿ ನಡೆದ ತಾಳಮದ್ದಳೆಯನ್ನು ಶಿವಪ್ರಸಾದ್ ರೈ ಮಠಂತಬೆಟ್ಟು ಸಂಯೋಜಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಸಂಚಾಲಕಿ ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿ ವಂದಿಸಿದರು. ದೇವಳದ ವತಿಯಿಂದ ಕಲಾವಿದರಿಗೆ ಶಾಲು ಹಾಗೂ. ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಲಾಯಿತು.

LEAVE A REPLY

Please enter your comment!
Please enter your name here