ಕಡಬ ಪಣೆಮಜಲಿನಲ್ಲಿ ನವರಾತ್ರಿ ಪೂಜೆ, ಹೊಸ್ತಾರೋಹಣ–ಆಯುಧ ಪೂಜೆ

0

ಕಡಬ: ಇಲ್ಲಿನ ಪಣೆಮಜಲು ಶ್ರೀ ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ದೇವಿಗೆ ಮಹಾಪೂಜೆ, ಹೊಸ್ತಾರೋಹಣ ಹಾಗೂ ಆಯುಧ ಪೂಜಾ ಕಾರ್ಯಕ್ರಮಗಳು ಜರುಗಿದವು.ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.



ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಜಿ. ಕೃಷ್ಣಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ. ಪಿ. ವರ್ಗಿಸ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ನೀಲಾವತಿ ಶಿವರಾಮ, ಪಟ್ಟಣ ಪಂಚಾಯತ್ ಕೌನ್ಸಿಲರ್‌ಗಳಾದ ಸೈಮಾನ್ ಸಿ. ಜಿ., ಕೃಷ್ಣಪ್ಪ ಪೂಜಾರಿ, ಅಕ್ಷತಾ, ದಯಾನಂದ ಪಿಜಕ್ಕಳ, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ, ನಿವೃತ್ತ ಅಧ್ಯಾಪಕ ಪೂವಪ್ಪ ಗೌಡ ಕೋಲ್ಪೆ, ಪೂವಪ್ಪ ಗೌಡ ಪಿಜಕ್ಕಳ, ಎಲ್ಯಣ್ಣ ಗೌಡ ನಡುಗುಡ್ಡೆ, ಊರಗೌಡ ಹರಿಯಪ್ಪ ಗೌಡ ಗೋಡಾಲು, ನಿವೃತ್ತ ಪಿ.ಡಿ.ಒ. ಆನಂದ ಗೌಡ ಅಲಂಗೂರು, ಸೋಮಪ್ಪ ಗೌಡ ಮೀನೆಪು, ಕಾರ್ತಿಕ್ ಪಿಜಕ್ಕಳ, ಕೊರಗಪ್ಪ ಗೌಡ ಕಲ್ಲರ್ಪೆ, ಹಿತೇಶ್ ಮಂಡೇಕರ್, ನವೀನ್ ಪಣೆಮಜಲು, ಶಾರದಾ ಕೇಶವ ಪುತ್ತಿಲ ಬಿಳಿನೆಲೆ, ಪರಮೇಶ್ವರ ಗೌಡ ಇಡ್ಯಡ್ಕ, ತೇಜಸ್ ಕಳಿಗೆ, ಲೋಕೇಶ್ ಕಳಿಗೆ, ಕಾಂಗ್ರೆಸ್ ಮುಖಂಡ ಗೋಪಿನಾಥ್ ಸೇರಿದಂತೆ ಊರಿನವರು ಹಾಗೂ ಪಣೆಮಜಲು ಕುಟುಂಬಸ್ಥರು ಉಪಸ್ಥಿತರಿದ್ದರು. ಕುಟುಂಬದ ಮುಖ್ಯಸ್ಥರಾದ ಜನಾರ್ಧನ ಗೌಡ ಪಣೆಮಜಲು, ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಞಣ ಸರ್ವರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here