ಬಜತ್ತೂರು ಗ್ರಾಮದ ಬಾರಿಕೆಯಲ್ಲಿ ಮಕ್ಕಳ ಕಲಾ ಪ್ರತಿಭಾ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬಾರಿಕೆಯಲ್ಲಿ ರಾಜ್ಯ ಬಾಲ ಭವನ ಸೊಸೈಟಿ, ಬೆಂಗಳೂರು; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ದಕ್ಷಿಣ ಕನ್ನಡ ಜಿಲ್ಲಾ ಬಾಲ ಭವನ ಸಮಿತಿ ಹಾಗೂ ತಾಲೂಕು ಬಾಲ ಭವನ ಸಮಿತಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಕಲಾ ಪ್ರತಿಭಾ ಕಾರ್ಯಕ್ರಮ.ಅ.16ರಂದು ನಡೆಯಿತು.ಮಕ್ಕಳಿಗೆ 03 ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಯಿತು.



ಕಾರ್ಯಕ್ರಮದಲ್ಲಿ ಸುಮಾರು 50 ಮಕ್ಕಳು ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಾಲ ಭವನದ ವತಿಯಿಂದ ಮೆಡಲ್ಸ್ ಹಾಗೂ ಬಹುಮಾನ ನೀಡಲಾಯಿತು.ಭಾಗವಹಿಸಿದ ಎಲ್ಲರಿಗೂ ಲೇಖನಿ ನೀಡಲಾಯಿತು.

ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು, ಜಿಲ್ಲಾ ಸ್ತೀ ಶಕ್ತಿ ಅಧ್ಯಕ್ಷರಾಗಿರುವ ಶಕುಂತಲಾ ವಹಿಸಿದರು. ವಳಾಲು ಅಂಗನವಾಡಿ ಶಿಕ್ಷಕಿ ಕೊಮಲಾಕ್ಷಿ, ನೀರಕಟ್ಟೆ ಅಂಗನವಾಡಿ ಶಿಕ್ಷಕಿ ಕಲಾವತಿ.. ಕಾರ್ಯಕ್ರಮದ ಸಂಯೋಜಕರಾಗಿರುವ ರೇಖಾ, ಧನ್ಯ, ಊರಿನ ಹಿರಿಯರಾದ ನಾಗಮ್ಮ, ಓಡಿಯಪ್ಪ ಗೌಡ, ಕಮಾಲಾಕ್ಷಿ ಉಪಸ್ಥಿತರಿದ್ದರು.



ಧರ್ಮಸ್ಥಳ ಯೋಜನೆಯ ವಳಾಲಿನ ಸೇವಾಪ್ರತಿನಿಧಿ ಬೇಬಿ ಅನಿಸಿಕೆ ವ್ಯಕ್ತಪಡಿಸಿದರು. ಊರಿನ ಮಕ್ಕಳು ಪ್ರಾಥನೆ ಮಾಡಿದರು. ಕಲಾವತಿ ಪ್ರಸ್ತಾವಿಕ ಮಾತನಾಡಿದರು. ಕೋಮಾಲಾಕ್ಷಿ ಸ್ವಾಗತಿಸಿ, ಧನ್ಯ ವಂದಿಸಿದರು. ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಓಡಿಯಪ್ಪ ಗೌಡರ ಮನೆಯಿಂದ ಮಾಡಲಾಯಿತು.

LEAVE A REPLY

Please enter your comment!
Please enter your name here