







ಪುತ್ತೂರು: ಮೈಸೂರು ದಸರಾದಲ್ಲಿ ನಡೆಯಲಿರುವ ಕಂಬಳಕ್ಕೆ ಪುತ್ತೂರಿನಿಂದ ಕೋಣಗಳನ್ನು ಮೆರವಣಿಗೆ ಮೂಲಕ ಕಳುಹಿಸಿಕೊಡಲಾಯಿತು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಚಾಲನೆ ನೀಡಲಾಯಿತು.



ಕೋಣಗಳ ಯಜಮಾನರೊಂದಿಗೆ ಬ್ಯಾಂಡ್ ವಾದ್ಯಗಳೊಂದಿಗೆ ವಾಹನಗಳ ಮೂಲಕ ಪ್ರಯಾಣ ಆರಂಭಗೊಂಡಿದೆ. ಕಾವೇರಿ ಜಾತ್ರೆ ಸೇರಿದಂತೆ ಸ್ಥಳೀಯ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸುಗಮ ಸಂಚಾರಕ್ಕೆ ಅವಕಾಶವಾಗುವಂತೆ ಕೋಣಗಳ ಪ್ರಯಾಣವನ್ನು ಯೋಜಿಸಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.














