ನಂದಕುಮಾರ್ ಅವರ ಮನೆಯಲ್ಲಿ ಸಂಪ್ರದಾಯಬದ್ಧ ದಸರಾ ಬೊಂಬೆಗಳ ಹಬ್ಬ

0

ಪುತ್ತೂರು: ಕೆ.ಎನ್.ಆರ್. ಕನ್‌ಸ್ಟ್ರಕ್ಷನ್ ಲಿಮಿಟೆಡ್‌ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ, ಮೈಸೂರು ಮೂಲದ ಬಿ.ಸಿ.ರೋಡ್ ನಿವಾಸಿ ನಂದಕುಮಾರ್ ಅವರ ಮನೆಯಲ್ಲಿ ನವರಾತ್ರಿ ಪ್ರಯುಕ್ತ ಭಕ್ತಿಶ್ರದ್ಧೆಯಿಂದ ದಸರಾ ಬೊಂಬೆ ಪೂಜೆ ನೆರವೇರಿಸಲಾಯಿತು.

ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷವಾಗಿ ಬೊಂಬೆಗಳನ್ನು ಅಲಂಕರಿಸಿ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸುಂದರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಶ್ರೀಕೃಷ್ಣ, ಗೋಪಿಕೆಯರು, ನವದುರ್ಗೆಯರು, ಸಪ್ತಮಾತೃಕೆಯರು, ಅಷ್ಟಲಕ್ಷ್ಮಿಯರು, ಶ್ರೀರಾಮ ಪಟ್ಟಾಭಿಷೇಕ, ವೆಂಕಟರಮಣ, ಪಟ್ಟದ ಬೊಂಬೆಗಳು ಸೇರಿದಂತೆ ಹಲವು ದೇವರುಗಳ ಹಾಗೂ ಸಾಂಪ್ರದಾಯಿಕ ಬೊಂಬೆಗಳ ಪ್ರದರ್ಶನ ಗಮನ ಸೆಳೆಯುತ್ತದೆ.

ವಿಶೇಷವಾಗಿ, ಹೆಣ್ಣಿನ ಜೀವನಯಾನವನ್ನು ತೊಟ್ಟಿಲಿನಿಂದ ತೊಟ್ಟಿಲಿನವರೆಗೆ ಎಂಬ ಪರಿಕಲ್ಪನೆಯಲ್ಲಿ ಮದುವೆ ಸೇರಿದಂತೆ ಜೀವನದ ವಿವಿಧ ಹಂತಗಳ ಮೂಲಕ ಬಿಂಬಿಸಿರುವುದು ಆಕರ್ಷಣೆಯಾಗಿದೆ. ಜೊತೆಗೆ ಮೈಸೂರು ದಸರಾ ಮೆರವಣಿಗೆಯ ದೃಶ್ಯವನ್ನೂ ಸುಂದರವಾಗಿ ರೂಪಿಸಲಾಗಿದೆ. ನವರಾತ್ರಿಯ ಮೊದಲ ದಿನದ ಶೈಲಪುತ್ರಿ ಪೂಜೆಯಿಂದ ವಿಜಯದಶಮಿಯವರೆಗಿನ ಆಚರಣೆಗಳನ್ನು ಬೊಂಬೆಗಳ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿರುವುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here