ಉಪ್ಪಿನಂಗಡಿ ಬಿಎಸ್‌ಎನ್‌ಎಲ್ ಕಚೇರಿಯ ಆವರಣ ಗೋಡೆಯ ತೆರವು ಕಾರ್ಯಾಚರಣೆ

0

ಉಪ್ಪಿನಂಗಡಿ: ಕಳೆದ ಶನಿವಾರ ರಾತ್ರಿ ಕುಸಿದು ಬಿದ್ದಿದ್ದ ಬಿಎಸ್‌ಎನ್‌ಎಲ್ ಕಚೇರಿಯ ಆವರಣ ಗೋಡೆಯು ಇಲ್ಲಿನ ಬಸ್ ನಿಲ್ದಾಣದ ಪ್ರಯಾಣಿಕರ ತಂಗುದಾಣದ ಮೇಲೆ ವಾಲಿ ನಿಂತಿದ್ದು ಸಂಭಾವ್ಯ ಅಪಾಯವನ್ನು ತಡೆಗಟ್ಟುವ ಸಲುವಾಗಿ ಬಿಎಸ್‌ಎನ್‌ಎಲ್ ಅಧಿಕಾರಿಗಳು ವಾಲಿದ್ದ ಗೋಡೆಯನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆದಿತ್ಯವಾರದಂದು ನಡೆಸಿದರು.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಸ್ ನಿಲ್ದಾಣದ ಸನಿಹದಲ್ಲಿದ್ದ ಆವರಣ ಗೋಡೆಯು ಕುಸಿದು ಬಿದ್ದಿತ್ತು. ಈ ವೇಳೆ ಗೋಡೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದರೆ, ಬಹುಭಾಗ ಜಾಹೀರಾತು ಫಲಕದ ಕಂಬದ ಆಧಾರದಲ್ಲಿ ಬೀಳದೆ ಪ್ರಯಾಣಿಕರ ತಂಗುದಾಣಕ್ಕೆ ವಾಲಿ ನಿಂತಿತ್ತು. ಇದರಿಂದಾಗಿ ಅಪಾಯದ ಸ್ಥಿತಿ ಉಂಟಾಗಿರುವುದನ್ನು ಮನಗಂಡ ಬಿಎಸ್‌ಎನ್‌ಎಲ್ ಅಧಿಕಾರಿಗಳು ಆದಿತ್ಯವಾರದಂದು ಜೆಸಿಬಿ ಮೂಲಕ ಆವರಣಗೋಡೆಯ ತೆರವು ಕಾರ್ಯಾಚರಣೆ ನಡೆಸಿದರು.

ಈ ಮಧ್ಯೆ ಪ್ರಯಾಣಿಕರ ತಂಗುದಾಣದ ಕಂಬಗಳ ಬುಡಗಳು ದುರ್ಬಲವಾಗಿದ್ದು, ಯಾವುದೇ ಸಮಯದಲ್ಲಿ ಅಪಾಯವನ್ನುಂಟಾಗುವ ಸಾಧ್ಯತೆಯ ಬಗ್ಗೆ ಪತ್ರಿಕಾ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಪಂಚಾಯತ್ ಅಬಿವೃದ್ಧಿ ಅಧಿಕಾರಿ ರವಿಚಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here