







ಪುತ್ತೂರು: ನೆಹರುನಗರ ಮಂಗಲ ಸ್ಟೋರ್ ಮುಂಭಾಗದಲ್ಲಿರುವ ಶ್ರೀ ಮೂಕಾಂಬಿಕಾ ಮೋಟಾರ್ ವರ್ಕ್ಸ್ನಲ್ಲಿ ಅ. 19ರಂದು ಆಯುಧ ಪೂಜಾ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.



ಫೋರ್ ವೀಲ್ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ರಿಪೇರಿ, ಬಾಡಿವರ್ಕ್ಸ್ ಹಾಗೂ ಪೇಂಟಿಂಗ್ ಸೇವೆಗಳನ್ನು ಒದಗಿಸುತ್ತಿರುವ ಸಂಸ್ಥೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅರ್ಚಕ ಸುಬ್ರಹ್ಮಣ್ಯ ಮಯ್ಯ ಹಾಗೂ ಬಳಗದವರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ಗ್ರಾಹಕ ಬಂಧುಗಳ ವಾಹನಗಳಿಗೆ ಆಯುಧ ಪೂಜೆ ನೆರವೇರಿಸಲಾಯಿತು.




ಕಾರ್ಯಕ್ರಮದಲ್ಲಿ ಸೇಡಿಯಾಪು ಜನಾರ್ದನ ಭಟ್, ಮಂಗಳೂರು ಆಟೋ ಏಜೆನ್ಸಿಯ ಮಾಲೀಕ ರವಿರಾಜ್ ಭಟ್, ಮುಕುಂದ ಕೃಷ್ಣ ಬಸ್ಸಿನ ಮಾಲೀಕರು , ಸುದರ್ಶನ್ ಮುರ ಸೇರಿದಂತೆ ಹಲವು ಗಣ್ಯರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲೀಕ ಸುರೇಶ್ ಅವರ ಮಾತೃಶ್ರೀ, ರಕ್ತೇಶ್ವರಿ ವಠಾರದ ನಿವಾಸಿ ನಿರ್ಮಲಾ, ಸಹೋದರ ಸತೀಶ್, ಸಹೋದರಿಯರಾದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗಿಯಾಗಿರುವ ವೀಣಾ ರವೀಂದ್ರ, ವಾಣಿ ದಯಾನಂದ, ಭಾವಂದಿರಾದ ಕೃಷಿಕ ರವೀಂದ್ರ, ಬೊಳುವಾರಿನ ಲಕ್ಷ್ಮೀ ಮೀಟರ್ ವರ್ಕ್ಸ್ನ ಮಾಲೀಕ ದಯಾನಂದ, ಹರೀಶ್ ಮತ್ತು ಸೌಮ್ಯ ಹರೀಶ್ ಕಾಣಿಯೂರು, ರವೀಂದ್ರ ಅವರ ಪುತ್ರ ಶಿವಾಗ್ನಿ, ದಯಾನಂದರವರ ಪುತ್ರಿಯಾರಾದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಮೌಲ್ಯ ಮತ್ತು ಹಂಸಿಕಾ, ಹರೀಶ್ ರವರ ಪುತ್ರಿ ಕು. ತನ್ವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಂಸ್ಥೆಯ ಮಾಲೀಕ ಸುರೇಶ್ ಆರ್., ಅವರ ಪತ್ನಿ ಪ್ರವೀಣಾ ಸುರೇಶ್ ಹಾಗೂ ಮಕ್ಕಳಾದ ಸಾನ್ವಿ ಮತ್ತು ಶ್ರೀಯಾ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಸಂಸ್ಥೆಯ ಸಿಬ್ಬಂದಿಗಳಾದ ಜಿನ್ನಪ್ಪ, ಸುರೇಂದ್ರ, ಖಾದರ್, ಅರುಣ್, ವಸಂತ್, ದಿನೇಶ್ ಹಾಗೂ ಮಮ್ಮದ್ ಕುಂಞ ಸಹಕರಿಸಿದರು.










