ಬೆಟ್ಟಂಪಾಡಿ ಸರಕಾರಿ ಪದವಿ ಕಾಲೇಜಿನಲ್ಲಿ ಗೀತಗಾಯನ ಕಾರ್ಯಕ್ರಮ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ, ಕರ್ನಾಟಕ ದಕ್ಷಿಣ ಪ್ರಾಂತದ ಭಾರತ ಬೋಧಮಾಲಾ 21ನೇ ಸರಣಿ ಕಾರ್ಯಕ್ರಮದ ಅಂಗವಾಗಿ ಅ. 17 ರಂದು ಗೀತಗಾಯನ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮದಲ್ಲಿ ವಿವೇಕಾನಂದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ಅವರು ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು. ಸುಧಾನ ವಸತಿ ಶಾಲೆ, ಪುತ್ತೂರಿನ ಕನ್ನಡ ಶಿಕ್ಷಕಿ  ಕವಿತಾ ಅಡೂರು ಅವರು ಕವಿತೆಗಳ ಒಳನೋಟ ಹಾಗೂ ಅವುಗಳ ಅರ್ಥ ವ್ಯಾಖ್ಯಾನವನ್ನು ನೀಡಿದರು. ಗೀತೆಗಳ ಭಾವಾರ್ಥ ಮತ್ತು ಕಾವ್ಯದ ಆಶಯಗಳನ್ನು ತಮ್ಮ ವಿವರಣೆಯ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಶ್ರೀ ನರಸಿಂಹ ಭಟ್ ತಬಲಾ ಹಾಗೂ ಶ್ರೀ ವಿಶ್ವನಾಥ ನಾಯಕ್ ಹಾರ್ಮೋನಿಯಂ ನಲ್ಲಿ ಸಹಕರಿಸಿದರು.

 ಪ್ರಾಂಶುಪಾಲರಾದ ಪ್ರೊ. ದಾಮೋದರ ಕಣಜಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಅನಂತ ಭಟ್  ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕು. ಅನಿತಾ, ಅಕ್ಷತಾ ಹಾಗೂ ತನುಶ್ರೀ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಸಂದೇಶ್  ವಂದಿಸಿದರು. ಸಾಂಸ್ಕೃತಿಕ ಸಹ ಕಾರ್ಯದರ್ಶಿ ದೀಕ್ಷಿತಾ ಟಿ. ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಗೀತಗಾಯನ ಮತ್ತು ಕಾವ್ಯ ವ್ಯಾಖ್ಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಹಾಗೂ ಕನ್ನಡ ಭಾವಗೀತೆಗಳ ಅಭಿರುಚಿಯನ್ನು ಬೆಳೆಸುವಲ್ಲಿ ಕಾರ್ಯಕ್ರಮ ಸಹಕಾರಿಯಾಯಿತು.

LEAVE A REPLY

Please enter your comment!
Please enter your name here