ಪರಣೆ ಸೀತಾರಾಮ ಗೌಡ ನಿಧನ

0

ಪುತ್ತೂರು : ಸವಣೂರು ಗ್ರಾಮದ ಪರಣೆ ಪಂಚಮಿ ನಿವಾಸಿ ಸೀತಾರಾಮ ಗೌಡ ( 84 ವ) ರವರು ಅ. 19 ರಂದು ಸೃಗೃಹದಲ್ಲಿ ನಿಧನರಾದರು.

ಸೀತಾರಾಮ ಗೌಡ ಅವರು 40 ವರ್ಷ ಮೊದಲು ಪರಣೆಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸಿಕೊಂಡಿದ್ದರು. ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹೆಸರನ್ನು ಪಡೆದಿದ್ದರು. ಮೃತರು ಪತ್ನಿ ಗಿರಿಜಾ, ಮಕ್ಕಳಾದ ಶಶಿಪ್ರಭಾ, ಉದ್ಯಮಿ ದಯಾನಂದ, ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸವಣೂರು,,ಅಳಿಯ ನಿವೃತ್ತ ಎಎಸ್ ಐ ನಾರಾಯಣ ಗೌಡ, ಸೊಸೆಯಂದಿರಾದ ವಾಣಿ ಹಾಗೂ ಮಣಿಕರ ಸರಕಾರಿ ಫ್ರೌಡ ಶಾಲಾ ಶಿಕ್ಷಕಿ ವಸಂತಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತರ ಮನೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಣಣಿಕ ಮುಖಂಡರುಗಳು ಭೇಟಿ ನೀಡಿ, ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here