







ಕಳೆದ 12 ವರುಷಗಳಿಂದ ಮುರ ಜಂಕ್ಷನ್ ಬಳಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಕೆ.ಎಸ್ ಮಾಲೀಕತ್ವದ ಇಂಜನಿಯರಿಂಗ್ ವರ್ಕ್ಸ್


ಗಣಹೋಮ , ಲಕ್ಷ್ಮೀ ಪೂಜೆ , ಆಯುಧ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮೂಲಕ ನೂತನ ಸಂಸ್ಥೆ ಶುಭಾರಂಭ…



ಪುತ್ತೂರು: ಕಳೆದ 12 ವರ್ಷಗಳಿಂದ ಪುತ್ತೂರಿನ ಮುರ ಜಂಕ್ಷನ್ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಕೆ.ಎಸ್. ಮಾಲೀಕತ್ವದ ಶ್ರೀ ವಿನಾಯಕ ಇಂಡಸ್ಟ್ರೀಸ್ ಸಂಸ್ಥೆಯು ಮುರ ಗೌಡ ಸಮುದಾಯ ಭವನದ ಬಳಿಯ ತನ್ನ ಸ್ವಂತ ಕಟ್ಟಡ ‘ಶ್ರೀ ವಿನಾಯಕ ಸದನ’ಕ್ಕೆ ಸ್ಥಳಾಂತರಗೊಂಡಿದ್ದು, ಅ. 20ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು.
ನೂತನ ಕಟ್ಟಡದಲ್ಲಿ ಅರ್ಚಕ ಅನಂತ ಮಯ್ಯ ಕೋಡಿಂಬಾಡಿ ಹಾಗೂ ಹರಿಕೃಷ್ಣ ಕಾರಂತ ನಂದಾವರ ಬಳಗದವರಿಂದ ಗಣಹೋಮ, ಲಕ್ಷ್ಮೀ ಪೂಜೆ ಹಾಗೂ ವಾಹನಗಳಿಗೆ ಆಯುಧ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಸಂಸ್ಥೆಯ ಅಭಿವೃದ್ಧಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲೀಕ ಹರೀಶ್ ಅವರ ಮಾತೃಶ್ರೀ ಲಲಿತಾ ಕೋಡಿಂಬಾಡಿ, ಸಹೋದರ ಸುರೇಶ್ ಕೋಡಿಂಬಾಡಿ, ಮೆಸ್ಕಾಂ ಉದ್ಯೋಗಿ ಅಕ್ಷಯ್ ಶೆಟ್ಟಿ, ಮುರ ಶ್ರೀಮಾತಾ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ರುಕ್ಮಯ ಗೌಡ ಹಾಗೂ ರಂಜಿತ್ ಮುರ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲೀಕ ಹರೀಶ್ ಕೋಡಿಂಬಾಡಿ, ಅವರ ಪತ್ನಿ ಕಾವ್ಯಶ್ರೀ ಹರೀಶ್ ಹಾಗೂ ಪುತ್ರ ಧ್ರುವಿಕ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಜೈಸನ್ ಮತ್ತು ರಕ್ಷಿತ್ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಸಹಕರಿಸಿದರು.

ವಿವಿಧ ವೆಲ್ಡಿಂಗ್ ಸೇವೆಗಳು ಲಭ್ಯ – ಹರೀಶ್ ಕೋಡಿಂಬಾಡಿ ಶ್ರೀ ವಿನಾಯಕ ಇಂಡಸ್ಟ್ರೀಸ್ ಸಂಸ್ಥೆಯು ವೆಲ್ಡಿಂಗ್ ವರ್ಕ್ಸ್, ಗೇಟ್ ವರ್ಕ್ಸ್, ಗ್ರಿಲ್ ವರ್ಕ್ಸ್, ರೋಲಿಂಗ್ ಶಟರ್ ಹಾಗೂ ರೈಲಿಂಗ್ ಸೇರಿದಂತೆ ವಿವಿಧ ಬಗೆಯ ಕೆಲಸಗಳನ್ನು ನಿರ್ವಹಿಸುತ್ತಿದೆ. ಕಳೆದ 12 ವರ್ಷಗಳಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಸಂಸ್ಥೆಯು ಇದೀಗ ಸ್ವಂತ ಕಟ್ಟಡದಲ್ಲಿ ತನ್ನ ಸೇವೆಗಳನ್ನು ಮುಂದುವರಿಸಲಿದೆ.ಸಂಸ್ಥೆಯ ಬೆಳವಣಿಗೆಗೆ ನಿರಂತರವಾಗಿ ಸಹಕಾರ ಮತ್ತು ಬೆಂಬಲ ನೀಡುತ್ತಾ ಬಂದಿರುವ ಗ್ರಾಹಕ ಬಂಧುಗಳು ಮುಂದೆಯೂ ಇದೇ ರೀತಿಯ ಪ್ರೀತಿ, ವಿಶ್ವಾಸ ಹಾಗೂ ಸಹಕಾರವನ್ನು ನೀಡುವಂತೆ ಹರೀಶ್ ಕೋಡಿಂಬಾಡಿ ವಿನಂತಿಸಿದ್ದಾರೆ.










