







ಪುತ್ತೂರು: ಪರ್ಪುಂಜ ರಾಮಜಾಲುವಿನಲ್ಲಿರುವ ಶ್ರೀ ರಕ್ತೇಶ್ವರಿ ಪಂಜುಲಿ ಹಾಗೂ ಪರಿವಾರ ದೈವಗಳ ಸಾನಿಧ್ಯದ ಪ್ರಥಮ ವರ್ಷದ ಪ್ರತಿಷ್ಠಾಪನಾ ದಿನೋತ್ಸವವು ನ.07ರಂದು ವಿಜೃಂಭಣೆಯಿಂದ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅ.18 ರಂದು ಸಾನಿಧ್ಯದ ಆವರಣದಲ್ಲಿ ಜರುಗಿತು.
ಸಾನಿಧ್ಯ ಸಮಿತಿಯ ಗೌರವ ಸಲಹೆಗಾರರಾದ ಗಣೇಶ್ ಕೋಡಿಬೈಲು ಅವರು ಆಮಂತ್ರಣ ಪತ್ರಿಕೆಯನ್ನು ವಿಧ್ಯುಕ್ತವಾಗಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಪ್ರೇಮ್ ರಾಜ್ ರೈ ಪರ್ಪುಂಜ, ಗೌರವ ಸಲಹೆಗಾರ ವಿಠಲ ಗೌಡ ಶಿಬರಿಗುರಿ, ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕಾರ್ಯಾಧ್ಯಕ್ಷರಾದ ಅನಿಲ್ ರೈ ಬಾರಿಕೆ, ಪ್ರಧಾನ ಕಾರ್ಯದರ್ಶಿ ಹರಿಹರ ಕೋಡಿಬೈಲು ಹಾಗೂ ಕೋಶಾಧಿಕಾರಿ ಪ್ರಮೀಳಾ ಎಸ್, ಸ್ನೇಹ ಯುವಕ ಮಂಡಲದ ಅಧ್ಯಕ್ಷ ಅಶ್ವಿನ್ ಪಿದಪಟ್ಲ, ಕಾರ್ಯದರ್ಶಿ ಕಿಶನ್ ಗೌಡ, ಸಮಿತಿಯ ಉಪಾಧ್ಯಕ್ಷರುಗಳಾದ ದಿನೇಶ್ ಗೌಡ ಪರ್ಪುಂಜ, ರಾಜೇಶ್ ಗೌಡ ಶೇಡಿಗುಂಡಿ, ಸುರೇಶ್ ಪೂಜಾರಿ ಪರ್ಪುಂಜ, ಕಾರ್ಯದರ್ಶಿಗಳಾದ ರಾಜೇಶ್ ಪಿದಪಟ್ಲ, ನಿತಿನ್ ಗೌಡ ಪರ್ಪುಂಜ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ., ರೇಖಾ ಎಸ್, ಭವ್ಯಶ್ರೀ ಶೇಡಿಗುಂಡಿ, ಮೀನಾಕ್ಷಿ, ಕಮಲ, ಜಯಕುಮಾರಿ, ಉಷಾಲತಾ, ಜಿತೇಶ್ ಪೂಜಾರಿ, ಧನುಷ್ ರೈ, ಪ್ರದೀಪ್ ಜೋಗಲೇಕಾರ್ ಮತ್ತು ಶ್ರೇಯ ಆರ್ ರೈ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.












