







ಕಾಣಿಯೂರು: ಬೆಂಗಳೂರಿನಲ್ಲಿ ನ 14 ರಿಂದ ನ 19ರವರೆಗೆ ನಡೆಯಲಿರುವ ಮಿನಿ ಒಲಂಪಿಕ್ ಕಬಡ್ಡಿ ಪಂದ್ಯಾಟಕ್ಕೆ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಮೂವರು ಬಾಲಕರು ಮತ್ತು ಇಬ್ಬರು ಬಾಲಕಿಯರು ಆಯ್ಕೆಯಾಗಿರುತ್ತಾರೆ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಕಡಬ ತಾಲೂಕು ಕಾಣಿಯೂರು ಗ್ರಾಮದ ಬಂಡಾಜೆ ಕರುಣಾಕರ ಎನ್ ಮತ್ತು ಜಯಂತಿ ಕೆ ದಂಪತಿಗಳ ಪುತ್ರ ಬಿಂದನ್ ಎನ್, ಕಡಬ ತಾಲೂಕು ಕಾಯಿಮಣ ಗ್ರಾಮದ ಜಯಪ್ರಕಾಶ್ ಬಿ ಎಸ್ ಮತ್ತು ವೇದಾವತಿ ದಂಪತಿಗಳ ಪುತ್ರ ಅಭಿನ್ ಜೆ ಬಿ, ಕಡಬ ತಾಲೂಕು ಕಾಣಿಯೂರು ಗ್ರಾಮದ ಗುಂಡಿಗದ್ದೆ ಶಿವಪ್ರಸಾದ್ ಮತ್ತು ಪ್ರಮೀಳಾ ಬಿ ದಂಪತಿಗಳ ಪುತ್ರ ಉಜ್ವಲ್ ಜಿ ಎಸ್ ಆಯ್ಕೆಯಾಗಿರುತ್ತಾರೆ.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕು ಮುಪ್ಪೇರ್ಯ ಗ್ರಾಮದ ಟಪಾಲಕಟ್ಟೆ ಹರೀಶ್ ರೈ ಮತ್ತು ಸಪ್ನ ರೈ ದಂಪತಿಗಳ ಪುತ್ರಿ ಅಪೇಕ್ಷಾ ರೈ, ಕಡಬ ತಾಲೂಕು ಕಾಣಿಯೂರು ಗ್ರಾಮದ ಮುಗರಂಜ ಉಮೇಶ ಮತ್ತು ದಯಾಮಣಿ ಎಂ ದಂಪತಿಗಳ ಪುತ್ರಿ ಪೂಜಾ ಎಂ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ ಮತ್ತು ಸುವರ್ಣ ಕೆ ಬಿ ತರಬೇತಿ ನೀಡಿರುತ್ತಾರೆ. ಇವರನ್ನು ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ, ಶಾಲಾ ಆಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕ- ಶಿಕ್ಷಕರೇತರ ವೃಂದದವರು ಮತ್ತು ವಿದ್ಯಾರ್ಥಿ ಮಿತ್ರರು ಅಭಿನಂದಿಸಿದರು.















