







ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ನವರಾತ್ರಿ ಉತ್ಸವ, ಪುತ್ತೂರು ದಸರಾ ಪ್ರಯುಕ್ತ ಇಂದು ಅ.21ರಂದು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.


ಅ.21ರಂದು ಸಂಜೆ ಗಂಟೆ 5ರಿಂದ ರಾತ್ರಿ 10ರ ವರೆಗೆ ಪುತ್ತೂರು ಪೇಟೆಯಲ್ಲಿ ಪುತ್ತೂರು ದಸರಾ ನಡೆಯಲಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕರು ಈ ಕೆಳಗಿನ ಸೂಚನೆಯನ್ನು ಪಾಲಿಸಲು ಕೋರಲಾಗಿದೆ.



ಸಾರ್ವಜನಿಕರು ಈ ಸಮಯದಲ್ಲಿ ಪುತ್ತೂರು ಪೇಟೆಯ ಒಳಭಾಗದ ರಸ್ತೆಗಳನ್ನು ಬಳಸದೆ, ಅಶ್ವಿನಿ ಸರ್ಕಲ್, ಪರ್ಲಡ್ಕ, ಲಿನೇಟ್ ಜಂಕ್ಷನ್ ಹೈವೇ ರಸ್ತೆಯನ್ನು ಬಳಸಿಕೊಂಡು ತಮ್ಮ ಪ್ರಯಾಣವನ್ನು ಮುಂದುವರಿಸುವಂತೆ ಹಾಗೂ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಂಚರಿಸುವವರು ಪಡೀಲ್ ಜಂಕ್ಷನ್ ಮೂಲಕ ಹಾಗೂ ಪುತ್ತೂರು ಪೇಟೆ ಕಡೆಗೆ ಕೊಟೇಚಾ ಕ್ರಾಸ್ ಮೂಲಕ ಸಂಚರಿಸುವಂತೆ ವಿನಂತಿಸಲಾಗಿದೆ. ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪುತ್ತೂರು ಸಂಚಾರ ಪೊಲೀಸರೊಂದಿಗೆ ಸಹಕರಿಸಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.










