ಪುತ್ತೂರು ದಸರಾ: ಇನ್‌ಸ್ಟಾಗ್ರಾಂ ರೀಲ್ಸ್ ಸ್ಪರ್ಧೆ

0

ಪುತ್ತೂರು: ಈ ಬಾರಿ ಶಾರದೋತ್ಸವ ವನ್ನು ಪುತ್ತೂರು ದಸರಾ ಎಂಬ ನಾಮಾಂಕಿತದೊಂದಿಗೆ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 92ನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮದಂದು ಅ.21ರಂದು ನಡೆಯಲಿರುವ ಪುತ್ತೂರು ದಸರಾ ಶೋಭಾಯಾತ್ರೆಯ ಕುರಿತು ಇನ್‌ಸ್ಟಾಗ್ರಾಂ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.


ನಿಬಂಧನೆಗಳು:
ವೀಡಿಯೋ ಅಪ್ ಲೋಡ್ ಮಾಡಲು ಕೊನೆಯ ದಿನಾಂಕ ಅ.24, ಪುತ್ತೂರು ಶಾರದೆಗೆ ಸಂಬಂಧಿಸಿದ ಅತ್ಯುತ್ತಮ ಛಾಯಾಗ್ರಹಣ ಮತ್ತು ದೃಶ್ಯಗಳು ಒಳಗೊಂಡಿರಬೇಕು, ದೈವಿಕ ಸಂಗೀತದೊಂದಿಗೆ ಅತ್ಯುತ್ತಮವಾದ ಎಡಿಟಿಂಗ್ ಹೊಂದಿರಬೇಕು, ಪುತ್ತೂರು ದಸರಾದ ಅಧಿಕೃತ ಲೋಗೋವನ್ನು ಬಳಸಬೇಕು, ರೀಲ್‌ನ ಅವಧಿ 1 ನಿಮಿಷಕ್ಕಿಂತ ಕಡಿಮೆ ಇರಬೇಕು, ವಿಜೇತರನ್ನು ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾಗುತ್ತದೆ (ವೀಕ್ಷಣೆಗಳ ಆಧಾರದ ಬದಲಾಗಿ), ಅಪ್‌ಲೋಡ್ ಮಾಡಿದ ವೀಡಿಯೋವನ್ನು ಪುತ್ತೂರು ದಸರಾ ಎಂಬ ಇನ್‌ಸ್ಟಾಗ್ರಾಂಗೆ ಟ್ಯಾಗ್ ಹಾಗೂ ಕೊಲಬ್ ಮಾಡಿರಬೇಕು.


ಶಾರದಾ ಮಾತೆಯ ಭವ್ಯತೆ ಇಡೀ ಜನಮಾನಸಕ್ಕೆ ಸಿಗಬೇಕು ಎಂಬ ರೀತಿಯಲ್ಲಿ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಶೋಭಾಯಾತ್ರೆಯ ಉದ್ಘಾಟನೆಯಿಂದ ದೇವಿಯ ವಿಗ್ರಹ ಜಲಸ್ಥಂಭನದವರೆಗೆ ಪ್ರತಿ ವೀಡಿಯೋದಲ್ಲಿನ ವಿಷಯ, ಗುಣಮಟ್ಟ ಮುಂತಾದವುಗಳನ್ನೊಳಗೊಂಡ ರೀಲ್ಸ್ ನ್ನು ಆಯ್ಕೆ ಮಾಡಲಾಗುವುದು, ಪ್ರಥಮ ಬಹುಮಾನವಾಗಿ ರೂ.10,000, ದ್ವಿತೀಯ 6,000, ತೃತೀಯ 4,000 ರೂ.ಗಳನ್ನು ವಿಜೇತರಿಗೆ ನೀಡಲಾಗುವುದು.
ಕೆದಂಬಾಡಿಗುತ್ತು ಸೀತಾರಾಮ ರೈ ಅಧ್ಯಕ್ಷರು, ಭಜನಾ ಮಂದಿರ ಪುತ್ತೂರು

LEAVE A REPLY

Please enter your comment!
Please enter your name here