







ಪುಣಚ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಡಿ.12 ಮತ್ತು 13 ರಂದು ನಡೆಯುವ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪುಣಚ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಅ.20 ರಂದು ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಿರಿಜಾ ಕಲ್ಯಾಣೋತ್ಸವ ಸಮಿತಿ ಸಹ ಸಂಚಾಲಕ ಉಮೇಶ್ ಕೋಡಿಬೈಲು ಗಿರಿಜಾ ಕಲ್ಯಾಣೋತ್ಸವ ಹಾಗೂ ಕೇಸರಿ ಸಂಗಮ ಕಾರ್ಯಕ್ರಮದ ಬಗ್ಗೆ ವಿವರಿಸಿದ ಅವರು ಗ್ರಾಮದ ಪ್ರತೀ ಹಿಂದೂ ಮನೆ ಮನೆಗಳಿಗೆ ಆಮಂತ್ರಣ ತಲುಪಿಸುವುದರ ಮುಖೇನ ನಾವೂ ಭಾಗಿಯಾಗುವುದರ ಜೊತೆಗೆ ಪ್ರತೀ ಹಿಂದೂ ಮನೆ ಬಂಧುಗಳನ್ನು ಕಾರ್ಯಕ್ರಮದಲ್ಲಿ ಜೋಡಿಸೋಣ ಎಂದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಘಾಟೆ ವೇದಿಕೆಯಲ್ಲಿದ್ದರು.
ಟ್ರಸ್ಟ್‌ನ ಸದಸ್ಯರಾದ ಪುಣಚ ಗ್ರಾ.ಪಂ.ಮಾಜಿ ಅಧ್ಯಕ್ಷೆ ಬೇಬಿ ಪಟಿಕಲ್ಲು, ಮಾಜಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಬಾಲಕೃಷ್ಣ ಮೂಡಂಬೈಲು, ರವಿ ನೀರುಮಜಲು, ಗಿರೀಶ್ ಆಜೇರು, ಕಮಲಾಕ್ಷ ಆಜೇರು, ಸೇಸಪ್ಪ ಕೂರೇಲು ಮತ್ತಿತರರು ಉಪಸ್ಥಿತರಿದ್ದರು.ಗಿರಿಜಾ ಕಲ್ಯಾಣೋತ್ಸವ ಆಮಂತ್ರಣ ಸಮಿತಿ ಸಹಸಂಚಾಲಕ, ಟ್ರಸ್ಟ್‌ನ ನಿರ್ದೇಶಕರೂ ಆದ ಹರೀಶ್ ಭಟ್ ನಡುಸಾರು ಪುಣಚ ಸ್ವಾಗತಿಸಿ, ಪುಣಚ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಪೊಯ್ಯಮೂಲೆ ವಂದಿಸಿದರು.












