







ಪುತ್ತೂರು: ಕಬಕ ಶ್ರೀ ಮಹಾದೇವಿ ಕಲಾಮಂದಿರದಲ್ಲಿ ಧರ್ಮಶಿಕ್ಷಣದ ಉದ್ಘಾಟನಾ ಸಮಾರಂಭ ನಡೆಯಿತು.ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿದ್ಯಾಶಂಕರ ಭಾರತೀ ಸನ್ನಿಧಾನಂಗಳ ಮಾರ್ಗದರ್ಶನದಲ್ಲಿ, ಧರ್ಮ ಶಿಕ್ಷಣ ಗ್ರಾಮ ಸಮಿತಿ, ಕಬಕ ವತಿಯಿಂದ ಧರ್ಮಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಸತೀಶ್ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಸುಬ್ರಹ್ಮಣ್ಯ ಭೈಪದವು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಧರ್ಮಭ್ಯೋದಯ ಧರ್ಮಶಿಕ್ಷಣ ಕ್ಷೇತ್ರದ ತಾಲೂಕು ಸಮಿತಿ ಸಂಚಾಲಕರು ಸುಬ್ರಹ್ಮಣ್ಯ ನಟ್ಟೋಜ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಭೋರ್ಕರ್, ಶ್ರೀ ಮಹಾದೇವಿ ಧರ್ಮ ಸೇವಾ ವಿಶ್ವಸ್ಥ ಮಂಡಳಿ ಕಬಕ ಇದರ ಅಧ್ಯಕ್ಷರು ವಿ. ಚಂದ್ರಶೇಖರ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಧರ್ಮ ಶಿಕ್ಷಣ ನೀಡುವ ಶಿಕ್ಷರಾದ ಅಕ್ಷತಾ ಬೈಪಾದವು, ಉಷಾ ದೇವಸ್ಯ, ಮೋಹಿನಿ ಜೇಡರಕೊಡಿ, ರುಕ್ಮಯ ಗೌಡ ಪೋಳ್ಯ, ಕವಿತಾ ಕಬಕ ಬೈಲು, ಸುನಿತಾ ಅಡ್ಯಾಲು, ಜತ್ತಪ್ಪ ಗೌಡ ಅಡ್ಯಾಲು, ನೇಹಾ ಕಲ್ಲಂದಡ್ಕ , ರೇಷ್ಮಾ ನೆಕ್ಕರೆ, ಸರಸ್ವತಿ ವಡ್ಯ, ಮಂಜುಳಾ ಕಬಕ ಮೊದಲಾದವರು ಉಪಸ್ಥಿತರಿದ್ದರು. ಧರ್ಮ ಶಿಕ್ಷಣ ಗ್ರಾಮ ಸಮಿತಿ ಅಧ್ಯಕ್ಷರಾದ ಧರ್ನಪ್ಪ ಸೀಗೆತ್ತಾಡಿ ಸ್ವಾಗತಿಸಿದರು, ಕವಿತಾ ಕಬಕ ಬೈಲು ಕಾರ್ಯಕ್ರಮ ನಿರೂಪಿಸಿದರು, ಧರ್ಮ ಶಿಕ್ಷಣ ಗ್ರಾಮ ಸಮಿತಿಯ ಸಂಚಾಲಕರು ಜಯರಾಮ್ ನೆಕ್ಕರೆ ವಂದಿಸಿದರು.










