







ಗೌರವ ಅಧ್ಯಕ್ಷ: ಶರತ್ ರೈ ಓಲ್ತಾಜೆ, ಅಧ್ಯಕ್ಷ: ಯತೀಶ್ ಮಡಿವಾಳ, ಪ್ರ.ಕಾರ್ಯದರ್ಶಿ: ಕೃಷ್ಣಪ್ಪ ಪೂಜಾರಿ, ಕೋಶಾಧಿಕಾರಿ: ಗುರುಪ್ರಸಾದ್ ಮಜ್ಜಾರ್, ಸಂಘಟಕ: ರಾಜೇಶ್ ಕೆ.ಮಯೂರ


ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ 9 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಶ್ರೀ ವಿಷ್ಣು ಸಾಂಸ್ಕೃತಿಕ ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲೋಕೇಶ್ ಸ್ವಾಮಿನಗರ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ನೂತನ ಪದಾಧಿಕಾರಿಗಳಾಗಿ ಸಂಘಟನೆಯ ಗೌರವ ಅಧ್ಯಕ್ಷರಾಗಿ ಶರತ್ ರೈ ಓಲ್ತಾಜೆ, ಅಧ್ಯಕ್ಷರಾಗಿ ಯತೀಶ್ ಮಡಿವಾಳ ಕೋಡಿಯಡ್ಕ ಹಾಗೂ ಉಪಾಧ್ಯಕ್ಷರಾಗಿ ನವೀನ್ ಮಜ್ಜಾರ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಪೂಜಾರಿ ತಿಂಗಳಾಡಿ,ಉಪ ಕಾರ್ಯದರ್ಶಿಯಾಗಿ ಸತೀಶ್ ಪೂಜಾರಿ ಮಜ್ಜಾರ್, ಕೋಶಾಧಿಕಾರಿಯಾಗಿ ಗುರುಪ್ರಸಾದ್ ಮಜ್ಜಾರ್, ಕ್ರೀಡಾ ಕಾರ್ಯದರ್ಶಿಯಾಗಿ ಹೇಮಚಂದ್ರ ಕೋಡಿಯಡ್ಕ , ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್ ಮಣಿಯಾಣಿ ಗೋಳ್ತಿಲ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿರಣ್ ಸ್ವಾಮಿನಗರ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವೀಣ್ ಬರೆ, ಸಂಘಟನೆಯ ಸಂಘಟಕರಾಗಿ ರಾಜೇಶ್ ಕೆ. ಮಯೂರ ಗೋಳ್ತಿಲ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಕಿಶೋರ್ ಶೆಟ್ಟಿ ಅರಿಯಡ್ಕ, ತಿಮ್ಮಪ್ಪ ಪೂಜಾರಿ ಮಜ್ಜಾರ್, ಮೋಹನ್ ದಾಸ್ ರೈ ಕುಂಬ್ರ, ಲೋಕೇಶ್ ರೈ ಅಮೈ, ಭವಿತ್ ಕುಮಾರ್ ಪಾಲ್ತಾಡಿ, ತಿಲಕ್ ರಾಜ್ ಉಡುಪಿ, ಮನೋಜ್ ರೈ ಮಾಡಾವು, ಜನಾರ್ಧನ ಪೂಜಾರಿ ಪದಡ್ಕ, ಸುನಿಲ್ ರೈ ಪಾಲ್ಗುಣಿ ಬೆಂಗಳೂರು, ಅಜಿತ್ ರೈ ದೇರ್ಲ ಹಾಗೂ ಸುರೇಶ್ ಪೂಜಾರಿ ತಿಂಗಳಾಡಿ ಇವರುಗಳನ್ನು ಒಮ್ಮತದಿಂದ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು.
ಅಭಿನಂದನೆ ಹಾಗೂ ಮುಂದಿನ ಕಾರ್ಯಕ್ರಮಗಳು: ಇದೇ ಸಂದರ್ಭದಲ್ಲಿ ಪುತ್ತೂರು ತಾಲೂಕು ಯುವಜನ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ. ಮಯೂರ ಇವರನ್ನು ಸಂಘಟನೆಯ ವತಿಯಿಂದ ಅಭಿನಂದಿಸಲಾಯಿತು. ಸಭೆಯಲ್ಲಿ ಬಳಗದ 9 ನೇ ವರ್ಷದ `ಕೆಸರುಡೊಂಜಿ ದಿನ’ ಕಾರ್ಯಕ್ರಮದ ಕುರಿತು ಚರ್ಚಿಸಲಾಗಿದ್ದು, ನ.1 ರಂದು ಕೆಸರುಡೊಂಜಿ ದಿನ ಕಾರ್ಯಕ್ರಮ ಹಾಗೂ ವಾರ್ಷಿಕ ಸಮಾರಂಭವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ವಿಶೇಷವಾಗಿ, ಗ್ರಾಮೀಣ ಮಟ್ಟದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರ ತೊಡಗಿಸಿಕೊಂಡಿರುವ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ‘ಮಜ್ಜಾರಡ್ಕ ವಿಷ್ಣು ಯುವಶಕ್ತಿ ಪ್ರಶಸ್ತಿ’ ನೀಡಿ ಗೌರವಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಾಮಾಜಿಕ ಸೇವೆಯಲ್ಲಿ ಮುಂಚೂಣಿ ಶ್ರೀ ವಿಷ್ಣು ಯುವಶಕ್ತಿ ಬಳಗವು ಈಗಾಗಲೇ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ‘ಮನೆ ಬೆಳಕು’ ಯೋಜನೆಯಡಿ 2 ನೂತನ ಮನೆಗಳ ಹಸ್ತಾಂತರ, ಹಲವು ಮನೆಗಳ ದುರಸ್ತಿ, ಸ್ವಚ್ಛತಾ ಕಾರ್ಯಕ್ರಮಗಳು, ವೈದ್ಯಕೀಯ ಮತ್ತು ನಾಯಕತ್ವ ಶಿಬಿರಗಳು, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಬೇಸಿಗೆ ಹಾಗೂ ಕುಣಿತ ಭಜನಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಅಲ್ಲದೆ, ರಕ್ತದಾನ ಶಿಬಿರಗಳ ಮೂಲಕ ಹಾಗೂ ತುರ್ತು ಸಂದರ್ಭಗಳಲ್ಲಿ ಜೀವರಕ್ಷಕವಾಗಿ ರಕ್ತದಾನ ಮಾಡುವ ಮೂಲಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವ ಮೂಲಕ ಸಮಾಜ ಸೇವೆಯಲ್ಲಿ ಸಕ್ರಿಯವಾಗಿದೆ. ಸಂಘಟನೆಯ ಸಮಾಜಮುಖಿ ಕಾರ್ಯಗಳಿಗೆ ಸದಾ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ನೀಡುತ್ತಿರುವ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸಲಾಗಿದ್ದು, ಮುಂದೆಯೂ ಇದೇ ರೀತಿಯ ಸಹಕಾರವನ್ನು ಬಯಸುವುದಾಗಿ ಸಂಘಟಕರಾದ ರಾಜೇಶ್ ಕೆ. ಮಯೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













