ದೋಳ್ಪಾಡಿ ಶಾಲೆಯಲ್ಲಿ ಶ್ರೀ ಶಾರದಾ ಪೂಜೆ

0

ಕಾಣಿಯೂರು: ದೋಳ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶಾರದಾ ಪೂಜೆಯು ನಡೆಯಿತು. ಪುಟಾಣಿ ಮಕ್ಕಳು ಮತ್ತು ಶಿಕ್ಷಕಿಯರು ದೀಪ ಬೆಳಗಿಸಿದರು. ಉಮೇಶ್ ಆಚಾರ್ಯ ದೋಳ್ಪಾಡಿ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಭಜನಾ ಕಾರ್ಯಕ್ರಮವನ್ನು ಕೇಶವ ಇಡ್ಯಡ್ಕ, ಯೋಗೀಶ್ ಆಚಾರ್ಯ, ಸುಬ್ರಹ್ಮಣ್ಯ ಕೂರೇಳು ವೇದವ್ಯಾಸ ಇವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ದಯಾನಂದ ಕೂರೇಲು, ಎಸ್ ಡಿ ಎಂ ಸಿ ಉಪಾಧ್ಯಕ್ಷರು, ಸದಸ್ಯರು ,ಹಿರಿಯ ವಿದ್ಯಾರ್ಥೀ ಸಂಘ ಪದಾಧಿಕಾರಿಗಳು, ವಿದ್ಯಾಭಿಮಾನಿಗಳು, ಪೋಷಕರು, ಊರವರು ಉಪಸ್ಥಿತರಿದ್ದರು. ಶಿಕ್ಷಕ ಜಯರಾಜ್ ಕಾರ್ಯಕ್ರಮ ನಿರೂಪಿಸಿ. ಶಿಕ್ಷಕಿ ಚಂಚಲಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ದೀಪಿಕಾ ವಂದಿಸಿದರು. ಶಿಕ್ಷಕಿಯರಾದ ಕಲಾವತಿ, ರಶ್ಮಿ ಸಹಕರಿಸಿದರು.

LEAVE A REPLY

Please enter your comment!
Please enter your name here