ಪುತ್ತೂರು: ಪೆಟ್ರೋಲ್ ಬಂಕ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು

0

ಪುತ್ತೂರು: ಸತ್ತಿಕಲ್ಲು ಎಂಬಲ್ಲಿ ಭಾರತ್ ಪೆಟ್ರೋಲ್ ಬಂಕ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವಾದ ಘಟನೆ ನಡೆದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ನವೀನ್ (45) ಅವರಿಗೆ ಸೇರಿದ KA 70 H 2035 ನಂಬರಿನ ಯಮಹಾ FZ ಬೈಕ್ ಕಳುವಾಗಿದೆ.

ನವೀನ್ ಅವರು ತಮ್ಮ ದೂರದ ಸಂಬಂಧಿ, ಕಬಕ ಗ್ರಾಮದ ಪಂಜುರ್ಲಿ ಪಾದೆ ನಿವಾಸಿ ಹರೀಶ್ ಅವರಿಗೆ ಬೈಕ್ ಬಳಕೆಗೆ ನೀಡಿದ್ದರು. ಹರೀಶ್ ಟ್ಯಾಂಕರ್ ಲಾರಿ ಚಾಲಕರಾಗಿದ್ದು, ಪ್ರತಿದಿನ ಮನೆಯಿಂದ ಬೈಕ್‌ನಲ್ಲಿ ಬಂದು ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿ ಲಾರಿ ಕರ್ತವ್ಯಕ್ಕೆ ಹೋಗುತ್ತಿದ್ದರು. ಅ.21ರಂದು ಬೆಳಿಗ್ಗೆ 7.50ಕ್ಕೆ ಬಂಕ್‌ನಲ್ಲಿ ಬೈಕ್ ನಿಲ್ಲಿಸಿದ್ದರು. ಲಾರಿ ರಿಪೇರಿಗೆ ಮಂಗಳೂರಿನ ಗ್ಯಾರೇಜ್‌ನಲ್ಲಿದ್ದ ಕಾರಣ, ಸ್ನೇಹಿತ ಮುರಳಿ ಅವರ ಬೈಕ್‌ನಲ್ಲಿ ಮಂಗಳೂರಿಗೆ ಹೋಗಿ ವಾಪಸ್ ಬಂದಿದ್ದರು.

ಸಂಜೆ 3.30ಕ್ಕೆ ಬಂಕ್‌ಗೆ ಬಂದು ನೋಡಿದಾಗ ಬೈಕ್ ಇದ್ದ ಸ್ಥಳದಲ್ಲಿ ಇರಲಿಲ್ಲ. ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ. ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ. 129/2026, ಕಲಂ 303(2) BNS ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here