ಬಡಗನ್ನೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ, ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ

0

ಬಡಗನ್ನೂರು: ಬಡಗನ್ನೂರು  ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶಾರದಾ ಪೂಜೆ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಅ 23 ರಂದು ನಡಯಿತು. ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಳಟ್ ಬಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು.

 ಈ ಸಂಧರ್ಭದಲ್ಲಿ ಶಾಲಾ ಎಸ್. ಡಿ. ಯಂ. ಸಿ ಅಧ್ಯಕ್ಷ  ಗಿರೀಶ್ ಗೌಡ ಕನ್ನಯ, ಉಪಾಧ್ಯಕ್ಷೆ ಸುಲೋಚನಾ, ಸದಸ್ಯರಾದ  ಸುನೀತಾ, ವಿಜಯ  ಸಾವಿತ್ರಿ  ಮುಖ್ಯ ಶಿಕ್ಷಕ  ಕುಮಾರ್ ಕೆ. ಜೆ., ಸಹ ಶಿಕ್ಷಕಿ ವಿಜಯಲಕ್ಷ್ಮಿ ಗೌರವ ಶಿಕ್ಷಕರಾದ, ಯಶಸ್ವಿನಿ, ಮಧುಶ್ರೀ  ಲಕ್ಷ್ಮಿ,  ಆಂಗ್ಲಮಾದ್ಯಮ  ಶಿಕ್ಷಕರಾದ ಸರಿತಾ,ವಿದ್ಯಾಶ್ರೀ ಹಾಗೂ ಮಕ್ಕಳ ಪೋಷಕರು ಶಿಕ್ಷಣಾಭಿಮಾನಿಗಳು ಮತ್ತು ಶಾಲಾ ಮಕ್ಕಳು ಹಾಗೂ ಎಲ್ ಕೆ ಜಿ, ಮತ್ತು ಯುಕೆಜಿ ಮಕ್ಕಳು  ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here