ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಪುತ್ತೂರಿನ ಸುಪ್ರಜಾ ರಾವ್ ಆಯ್ಕೆ

0

ಪುತ್ತೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇದರ 2026 – 27 ನೇ ಸಾಲಿನ ಗಮಕ ಕಲಾ ಪ್ರಕಾರದ ಶಿಷ್ಯವೇತನಕ್ಕೆ ಪುತ್ತೂರಿನ ಸುಪ್ರಜಾ ರಾವ್ ಆಯ್ಕೆಯಾಗಿರುತ್ತಾರೆ.
ಇವರು ಗಮಕಿ ಮಂಜುಳಾ ಎಸ್ ಭಟ್, ಮಂಚಿ ಇವರ ಗಮಕ ಶಿಷ್ಯೆಯಾಗಿರುತ್ತಾರೆ. ಗಮಕದಲ್ಲಿ ಪ್ರಥಮ, ಪ್ರೌಢ ಹಾಗೂ ವಿದ್ವತ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಇವರು 2025 ನೇ ಸಾಲಿನ ವಾಗ್ದೇವಿ ಗಮಕ ಕಲಾ ಸಂಘ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ತಿನ ವತಿಯಿಂದ, ಕುಮಾರವ್ಯಾಸ ಜಯಂತಿಯ ಅಂಗವಾಗಿ ನಡೆದಂತಹ ಬಾಲ ಪ್ರತಿಭೆಗಳ ವಾಚನ- ವ್ಯಾಖ್ಯಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಅದೇ ರೀತಿ ರಾಜ್ಯದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಗಮಕ ಕಾರ್ಯಕ್ರಮವನ್ನು ನೀಡಿರುತ್ತಾರೆ.ಇವರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಧ್ಯಾಪಕರಾದ ಡಾ.ಪ್ರಶಾಂತ್ ರಾವ್ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಮನ ರಾವ್ ದಂಪತಿಗಳ ಪುತ್ರಿಯಾಗಿದ್ದು, ಪ್ರಸಕ್ತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here